ಅಥಣಿ: ಶಾಲಾ ಕೊಠಡಿ ಕಾಮಗಾರಿಗಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಕಾಮಗಾರಿಗಳಿಗೆ ಶಾಸಕ ಮಹೇಶ್ ಕುಮಟಳ್ಳಿ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಬಡಕಂಬಿತೋಟ, ಸಿಂಡ್ ಫಾರ್ಮ್, ಮುರಗುಂಡಿ, ಮಸರಗುಪ್ಪಿ, ಹೊಸಟ್ಟಿ, ದೇವರಡ್ಡೆರಹಟ್ಟಿ, ಅಥಣಿ ಪಟ್ಟಣದ ಲಿಡಕರ ಕಾಲೋನಿ, ಬಡಚಿ, ಕಟಗೇರಿ, ಬುರ್ಲಟ್ಟಿ, ಗ್ರಾಮಗಳಲ್ಲಿ ಹೆಚ್ಚುವರಿ ಶಾಲೆ ಕೊಠಡಿಗಳನ್ನು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಗ್ರಾಮಸ್ಥರ ಕುಂದು ಕೊರತೆಗಳ ಆಲಿಸಿದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ 105 ಶಾಲೆ ಕೊಠಡಿಗಳನ್ನು ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದೆ. 13 ಕೋಟಿ ರೂ. ವೆಚ್ಚದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಅಥಣಿ ಜನರ ಮೇಲೆ ಅತಿವ ಪ್ರೀತಿ ಇರುವುದರಿಂದ ಅನುದಾನ ಕೊರತೆ ಇಲ್ಲ. ಎಲ್ಲ ಯೋಜನೆಗಳು ಸರಾಗಾವಾಗಿ ಸಾಗುತ್ತಿವೆ. ಡಿಸಿಎಂ ಸವದಿ, ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಅಥಣಿ ಭಾಗದ ನೀರಾವರಿ ಯೋಜನೆ ಕಾಮಗಾರಿಗಳು ಚುರುಕುಗೊಂಡಿವೆ- ಮಹೇಶ್ ಕುಮಟಳ್ಳಿ, ಅಥಣಿ ಶಾಸಕ, ಅಧ್ಯಕ್ಷರು ಕೊಳಗೇರಿ ಅಭಿವೃದ್ದಿ ಮಂಡಳಿ.