Breaking News

2 ವರ್ಷದ ಕಂದಮ್ಮನೊಂದಿಗೆ ಮನೆಬಿಟ್ಟಿದ್ದ ತಾಯಿ.. ಇಬ್ಬರ ಮೃತದೇಹ ಬಾವಿಯಲ್ಲಿ ಪತ್ತೆ

Spread the love

ಚಿಕ್ಕೋಡಿ: ತಾಯಿ ಹಾಗೂ ಮಗುವಿನ ಮೃತ ದೇಹ ತೆರೆದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದೇವಾಪೂರಹಟ್ಟಿ ಗ್ರಾಮದಲ್ಲಿ ನಡೆದಿದೆ.

ದೇವಾಪೂರಹಟ್ಟಿ ಗ್ರಾಮದ ರುಕ್ಮವ್ವ ಹಳಿಂಗ (38) ಹಾಗೂ ಮಗಳು ಅನ್ವಿತಾ ಹಳಿಂಗ (2) ಸಾವನ್ನಪ್ಪಿದರ ದುರ್ದೈವಿಗಳಾಗಿದ್ದು, ದೇವನಕಟ್ಟಿ ಗ್ರಾಮದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಗುರುವಾರ ಸಾಯಂಕಾಲ ಮನೆಯಿಂದ ಮಹಿಳೆ ರುಕ್ಮವ್ವ ತನ್ನ ಎರಡು ವರ್ಷದ ಮಗಳೊಂದಿಗೆ ಹೊರ ಬಂದಿದ್ದರು ಎನ್ನಲಾಗಿದೆ. ಆದರೆ ತಾಯಿ, ಮಗುವಿನ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ರಾಯಬಾಗ ಪೋಲಿಸರು ಭೇಟ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆಯ ಬಳಿಕವೇ ಇದು ಆತ್ಮಹತ್ಯೆ ಅಥವಾ ಕೊಲೆ ಎನ್ನುವುದು ತಿಳಿದು ಬರಬೇಕಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ