ಬೆಂಗಳೂರು: ಎಫ್‌ಬಿ ಪೋಸ್ಟ್‌ನಿಂದ ಹೊತ್ತಿ ಉರಿದ ಬೆಂಗಳೂರು ಪ್ರಕರಣದ ಮುಖ್ಯ ಆರೋಪಿಯೊಬ್ಬ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರ ಜೊತೆ ಸುತ್ತಾಡಿದ ವಿಡಿಯೋ ಈಗ ಲಭ್ಯವಾಗಿದೆ.ಹೌದು. ನಾಗವಾರ ವಾರ್ಡ್‌ನ ಕಾಂಗ್ರೆಸ್ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ಬೆಂಗಳೂರು ಗಲಭೆಯ 7ನೇ ಆರೋಪಿಯಾಗಿದ್ದಾನೆ. ಗಲಾಟೆ ನಡೆದ ರಾತ್ರಿ ಈತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಈತ ಮನೆಯಲ್ಲಿ ಇರಲಿಲ್ಲ. ಆದರೆ ಖಲೀಂ ಜಾರ್ಜ್ ಜೊತೆ ಸುತ್ತಾಡಿದ್ದಾನೆ.
ಅಷ್ಟೇ ಅಲ್ಲದೇ ಆರೋಪಿ ಜಾರ್ಜ್ ಹೊತೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಠಾಣೆಗೆ ಬಂದಿದ್ದರೂ ಪೊಲೀಸರು ಆತನನ್ನು ಬಂಧಿಸಿಲ್ಲ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಖಲೀಂ ಪಾಷಾ, ನಾನು ಗಲಭೆಯಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧ ಎಫ್‌ಐಆರ್ ಆಗಿರುವುದು ನನಗೆ ಗೊತ್ತಿಲ್ಲ. ಪೊಲೀಸರು ಬಂದಾಗ ನಾನು ಮನೆಗೆ ಬೀಗ ಹಾಕಿರಲಿಲ್ಲ. ಹೆಂಡತಿ ಮನೆಯಲ್ಲಿ ಇದ್ದೆ ಅದಕ್ಕೆ ಪೊಲೀಸರು ತಪ್ಪು ತಿಳಿದುಕೊಂಡಿದ್ದಾರೆ. ನನಗೂ ಗಲಭೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾನೆ.
Laxmi News 24×7