Breaking News

ಬೈಕ್ ಅಪಘಾತ- ಚಿಕಿತ್ಸೆ ಫಲಿಸದೆ ಸೈನಿಕ ಸಾವು

Spread the love

ಬಾಗಲಕೋಟೆ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈನಿಕನೊಬ್ಬ ಚಿಕಿತ್ಸೆ ಫಲಿಸದೇ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

 

ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಹನಮಂತ ಸಿದ್ರಾಮಪ್ಪ ಹಡಪದ(33) ಮೃತಪಟ್ಟ ದುರ್ದೈವಿ. ಬಾದಾಮಿಯಿಂದ ಪಟ್ಟದಕಲ್ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ನಂದಿಕೇಶ್ವರ ಗ್ರಾಮದ ಹತ್ತಿರ ಪಲ್ಸರ್ ಬೈಕ್‍ನಲ್ಲಿ ವೇಗವಾಗಿ ಬಂದ ಮಂಜುನಾಥ ಮಾಗುಂಡಪ್ಪ ಜತ್ತಿ, ಸೈನಿಕ ತೆರಳುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದ್ದ. ಕಳೆದ ಸೆ.8 ರಂದು ಘಟನೆ ನಡೆದಿತ್ತು.

ತಲೆಗೆ ತೀವ್ರ ಪೆಟ್ಟಾಗಿ, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಹನಮಂತ ಹಡಪದ ಅವರನ್ನು ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದು, ಈ ಕುರಿತು ಮೃತ ಸೈನಿಕನ ಪತ್ನಿ ಶಶಿಕಲಾ ಹಡಪದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್‍ಐ ನೇತ್ರಾವತಿ ಪಾಟೀಲ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ