ಕಾಗವಾಡ : ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ನಿರೂಪಿಸಿದ್ದಾಳೆ. ಇಂಗ್ಲೀಷ ಮಾಧ್ಯಮದಲ್ಲಿ 625 ಕ್ಕೆ 604 ಅಂಕ ಗಳಿಸಿ ಅಥಣಿ ಕಿತ್ತೂರ ರಾಣಿ ಚನ್ನಮ್ನ ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪೋಷಕರ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿ ಪ್ರಸಕ್ತ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 604 ಅಂಕ ಪಡೆದು 96.64 % ರಷ್ಟು ಅಂಕಗಳಿಸಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ದೀಪಾ ಭಡಕೆ ಕನ್ನಡ ವಿಷಯದಲ್ಲಿ 122, ಇಂಗ್ಲಿಷ್ 99, ಹಿಂದಿ 100, ವಿಜ್ಞಾನ 93, ಗಣಿತ 92 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾಳೆ. ವಿದ್ಯಾರ್ಥಿಯ ಮನೆಯಲ್ಲಿ ಕಟುಂಬಸ್ಥರಿಂದ ಸಂತೋಷ ಪಾರವೇ ಇಲ್ಲ
ಒಟ್ಟಾರೆಯಾಗಿ ಸಾಧಿಸುವ ಛಲವೊಂದಿದ್ದರೆ ಏನಬೇಕಾದರೂ ಸಾಧಿಸಬಹುದು ಇದಕ್ಕೆ ಬಡತನ ಸಿರಿತನ ಮುಖ್ಯವಲ್ಲ ಓದುವ ಹಂಬಲ, ಮನಸ್ಸು ಬೇಕು ಎನ್ನುವುದನ್ನು ಪೂಜಾ ಭಡಕೆ ತೋರಿಸಿಕೊಟ್ಟಿದ್ದಾಳೆ.