ಕಲಬುರಗಿ: ಸಾಲ ಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಹಾಂತಪ್ಪ ( 45 ) ಆತ್ಮಹತ್ಯೆ ಮಾಡಿಕೊಂಡ ರೈತ.
ಅಫಾಜಲ್ಪುರ್ ತಾಲ್ಲೂಕಿನ ದಿಕ್ಸಂಗಾ ಗ್ರಾಮದಲ್ಲಿ ತನ್ನ ಸ್ವಂತ ಹೊಲದಲ್ಲೇ ಕ್ರಿಮಿನಾಷಕ ಔಷಧ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಮಿನಾಷಕ ಔಷಧ ಸೇವನೆ ಮಾಡಿದ ಕೂಡಲೇ ರೈತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಈಗ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾರೆ.
ರೈತ ಬ್ಯಾಂಕ್ ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡಿದ್ದರು. ಈ ಬಾರಿ ಬೆಳೆ ಹಾನಿಯಾದ ಕಾರಣ ಕಂಗಲಾಗಿ ಸಾವಿಗೆ ಶರಣಾಗಿದ್ದಾರೆ. ಈ ಸಂಬಂಧ ರೇವೂರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Laxmi News 24×7