Breaking News

ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರು

Spread the love

ಹಾಸನ: ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪೊಂದು ಪೊಲೀಸರನ್ನೇ ತಳ್ಳಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಡಿಜೆ ಡ್ಯಾನ್ಸ್​ ತಡೆಯಲು ಮುಂದಾದ ಪೊಲೀಸ್​​ ಅಧಿಕಾರಿಯ ಮೇಲೆ ದುಂಡಾ ವರ್ತನೆ ತೋರಿದ್ದಾರೆ.

ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಯುವಕರು ಡಿಜೆ ಸೌಂಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಡಿಜೆ ಡ್ಯಾನ್ಸ್​ ತಡೆಯಲು ಹೋದ ಪೊಲೀಸ್​​ ಸಬ್​​​​ ಇನ್ಸ್​ಪೆಕ್ಟರ್ ಬಸವರಾಜು ಚಿಂಚೋಳಿ ಮತ್ತು ಯುವಕರ ನಡುವೆ ಮಾತಿಗೆ ಮಾತು ಬೆಳೆದಿದೆ.

ಇನ್ನು, ಗಲಾಟೆಗೆ ಜೋರಾಗಿಯೇ ನಡೆದಿದ್ದು ಪೊಲೀಸರನ್ನೇ ಯುವಕರು ತಳ್ಳಾಡಿದ್ದಾರೆ. ಈ ವೇಳೆ ಪೊಲೀಸರು ಅಸಹಾಯಕರಾಗಿದ್ದು, ಇದುವರೆಗೂ ಪ್ರಕರಣ ದಾಖಲಾಗಿಲ್ಲ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ