ದಾಂಡೇಲಿ : ಮನೆಯಿಂದ ತಪ್ಪಿಸಿಕೊಂಡಿದ್ದ ಬುದ್ದಿಮಾಂದ್ಯ 7 ವರ್ಷದ ಮಗುವಿನ ಪಾಲಕರನ್ನು ಗಂಟೆಯೊಳಗಡೆ ಪತ್ತೆ ಹಚ್ಚಿ, ಮಗುವನ್ನು ಪಾಲಕರಿಗೆ ಹಸ್ತಾಂತರಿಸಿದ ಘಟನೆ ಶನಿವಾರ ಬೆಳ್ಳಂ ಬೆಳಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸ್ಥಳೀಯ ಗಾಂಧಿನಗರದಲ್ಲಿ ಮಗುವೊಂದು ರಸ್ತೆಯಲ್ಲಿ ತಿರುಗಾಡುತ್ತಿದೆ, ಮಗು ಯಾರದ್ದೆಂದು ಗೊತ್ತಿಲ್ಲ ಎಂದು ಬೀಟ್ ಪೊಲೀಸ್ ಬೀಮಣ್ಣನವರಿಗೆ ಗಾಂಧಿನಗರದಿಂದ ಮೊಬೈಲ್ ಕರೆ ಬಂದಿದ್ದು, ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಭೀಮಣ್ಣ ಬೈಕನ್ನೇರಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ನೋಡಿದ ಭೀಮಣ್ಣನವರು ಸುತ್ತಮುತ್ತಲಿನವರಲ್ಲಿ ವಿಚಾರಿಸಿದ್ದಾರೆ ಇಷ್ಟಾದರೂ ಮಾಹಿತಿ ಸಿಗದಿದ್ದಾಗ ಪಿಎಸೈ ಯಲ್ಲಪ್ಪ.ಎಸ್ ಅವರ ಸೂಚನೆಯಂತೆ ಮಗುವನ್ನು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಈ ವೇಳೆ ಮಗುವಿನ ಪತ್ತೆಗೆ ಮಗುವಿನ ಪೋಟೊವನ್ನು ಎಲ್ಲ ಬೀಟ್ ಪೊಲೀಸರ ವಾಟ್ಸಪ್ ಗ್ರೂಪಿಗೆ ಹಾಕಿ ಪಾಲಕರ ಪತ್ತೆಗಾಗಿ ಮಾಹಿತಿಯನ್ನು ರವಾನಿಸಿದ್ದಾರೆ. ಠಾಣೆಯಲ್ಲೇ ಮಗುವಿನ ಆರೈಕೆ ಮಾಡಲಾಗಿದೆ,
ಇದಾಗಿ ಸ್ವಲ್ಪ ಹೊತ್ತಿನಲ್ಲಿ ಮಗುವಿನ ಪಾಲಕರಾದ ಗಾಂಧಿನಗರ ಆಶ್ರಯ ಕಾಲೋನಿಯ ಮಹಮ್ಮದ್ ರಫೀಕ್ ಅವರು ಪತ್ನಿ ಸಮೇತ ಠಾಣೆಗೆ ಬಂದು ಮಗು ಬುದ್ದಿಮಾಂದ್ಯವಾಗಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಿ ಮಗುವನ್ನು ಸ್ವೀಕರಿಸಿದ್ದಾರೆ.
ಪೊಲೀಸರ ಮಾನವೀಯ ಕಾರ್ಯ ಹಾಗೂ ಕ್ಷೀಪ್ರ ಕಾರ್ಯಾಚರಣೆಯಿಂದ ಗಂಟೆಯೊಳಗಡೆ ಮಗು ಪಾಲಕರ ಕೈ ಸೇರಿದೆ. ಇತ್ತ ಪಾಲಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7