Breaking News

ಸಚಿವ ಗೋವಿಂದ ಕಾರಜೋಳ ಮತ್ತು ಅವರ ಕಾರು ಚಾಲಕ ಸೇರಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿದ್ದಾರೆ. : ಆರ್‌.ಬಿ. ತಿಮ್ಮಾಪುರ

Spread the love

ಬಾಗಲಕೋಟೆ: ಸಚಿವ ಗೋವಿಂದ ಕಾರಜೋಳ ಮತ್ತು ಅವರ ಕಾರು ಚಾಲಕ ಸೇರಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಆರೋಪಿಸಿದರು.

ಗುರುವಾರ ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರು ಚಾಲಕ ಮತ್ತು ಸಚಿವರು ಸೇರಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿದ್ದಾರೆ. ತಮ್ಮ ವಾಹನ ಚಾಲಕನಿಗೆ ಕಳೆದ 17 ವರ್ಷಗಳ ಕಾಲ ಕಾರ್ಖಾನೆಯಿಂದ ತೆಗೆದುಕೊಂಡು ವೇತನ ಹಾಗೂ ಸರಕಾರಿ ವತಿಯಿಂದ ವೇತನ ಮಾಡಿಕೊಂಡಿದ್ದಾರೆ ಎಂದು ದಾಖಲಾತಿ ಪ್ರದರ್ಶಿಸಿ ಆರೋಪ ಮಾಡಿದರು. ತಕ್ಷಣವೇ ಗೋವಿಂದ ಕಾರಜೋಳ ರಾಜೀನಾಮೆ ನೀಡಿ ನೀಡಿ ತನಿಖೆ ಎದುರಿಸಬೇಕು. ತನಿಖೆಗೆ ಒಳಪಡುವ ಮುನ್ನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ರನ್ನ ಕಾರ್ಖಾನೆಯಲ್ಲಿ ಯಾರ ಆಡಳಿತ ಮಂಡಳಿಯಲ್ಲಿ ಕಾರ್ಖಾನೆ ಹಗರಣಗಳು ನಡೆದಿವೆ ಎಂದು ರೈತರಿಗೆ, ಕಾರ್ಮಿಕರಿಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಸಚಿವರಿಗೆ ತಿಮ್ಮಾಪುರ ಸವಾಲು ಹಾಕಿದರು. ಈಗ ರನ್ನಸಕ್ಕರೆ ಕಾರ್ಖಾನೆಗೆ 170 ಕೋಟಿ ರೂ. ನಿವ್ವಳ ಹಾನಿ ಆಗಿದೆ. 300 ಕೋಟಿಕ್ಕಿಂತ ಅಧಿಕ ಸಾಲದ ಸುಳಿಯಲ್ಲಿ ರನ್ನ ಕಾರ್ಖಾನೆಯಿದೆ ಎಂದರು. ರನ್ನ ಕಾರ್ಖಾನೆ ಈ ಪರಿಸ್ಥಿತಿಗೆ ಸಚಿವ ಕಾರಜೋಳ ಮತ್ತು ಅಧ್ಯಕ್ಷ ರಾಮಣ್ಣ ತಳೇವಾಡ ಇಬ್ಬರೂ ನೇರ ಹೊಣೆಗಾರರು. ಅಲ್ಲದೇ ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರದಲ್ಲಿ ಸಚಿವ ಕಾರಜೋಳ ಅವರ ಪಾಲು ಸಹ ಇದೆ. ಮುಧೋಳದ ಜನತೆ, ಕಾರ್ಮಿಕರು ಮತ್ತು ರೈತರ ಮತದಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಅದಕ್ಕಾಗಿ ರನ್ನ ಕಾರ್ಖಾನೆ ಆರಂಭಿಸಿ ಅವರ ಋಣ ತೀರಿಸಿ ಎಂದರು.

ಸರ್ಕಾರದಿಂದ 100ಕೋಟಿ ರೂ.ಹಣ ತಂದು ರನ್ನ ಕಾರ್ಖಾನೆ ಆರಂಭಿಸಿ ರೈತ ಮತ್ತು ಕಾರ್ಮಿಕರಿಗೆ ಆದ ಹಾನಿ, ಅನ್ಯಾಯ ಸರಿಪಡಿಸಿ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಪಕ್ಷದವರು ವಿರೋಧ ಪಕ್ಷ ಇರುವ ಹಿನ್ನೆಲೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕೇಳಬಾರದೇ ಎಂದು ಪ್ರಶ್ನೆ ಮಾಡಿಡಿದರು.

ನಾವು ರಾಜಕಾರಣ ಮಾಡುತ್ತಿಲ್ಲ. ದಾಖಲೆಯ ಮೂಲಕ ಭ್ರಷ್ಟಾಚಾರ ‌ ಬಹಿರಂಗ ಪಡಿಸಿದ್ದೇವೆ. ಸಚಿವರು ಆರೋಪ ಮಾಡಿದ್ದಕ್ಕೆ ದಾಖಲೆ ಸ‌ಮೇತ ತೋರಿಸಿದ್ದೇನೆ ಎಂದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ