Breaking News

ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ , ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಆರೋಪ:

Spread the love

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿಯಲ್ಲಿ ಚುನಾವಣೆಯಲ್ಲಿ ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ.

ಪರಾಭವಗೊಂಡ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಪ್ರತಿಭಟನೆ ಕೈಗೊಂಡು ಮರುಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಮರುಚುನಾವಣೆ ನಡೆಸಬೇಕು. ನಡೆಸದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ, ಮತ್ತು ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಮಾಯವಾಗಿ ಗೊಂದಲ ಸೃಷ್ಟಿಸಲಾಗಿದೆ ಪರಿಣಾಮ ಸಾಕಷ್ಟು ಮತದಾರರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸಾಕಷ್ಟು ಕಡೆ ಬೋಗಸ್ ಮತದಾನ ನಡೆದಿದೆ ಆದರೂ ಚುನಾವಣಾಧಿಕಾರಿಗಳು ಕ್ರಮಕೈಗೊಂಡಿಲ್ಲ. ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ”

Spread the love“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ” ಫೆಬ್ರುವರಿ ಹಾಗೂ ಮಾರ್ಚ ತಿಂಗಳಿನ ಗ್ರಹಣ ಹಿಡಿದಿದ್ದ ಗೃಹಲಕ್ಷ್ಮೀಗೆ ಗ್ರಹಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ