ಬಳ್ಳಾರಿ: ಕಾಣೆಯಾದ ತಂದೆಯನ್ನ ಹುಡುಕಲು ಹೋದ ಮಗ ಭೀಕರ ಅಪಘಾತ ಸಂಭವಿಸಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊಳಗಲ್ ಗ್ರಾಮದ ಬಳಿ ನಡೆದಿದೆ.
ತಿಪ್ಪೇಸ್ವಾಮಿ (40) ಮೃತಪಟ್ಟ ದುರ್ದೈವಿ. ನಗರದ ಕರಿಮಾರೆಮ್ಮ ಕಾಲೋನಿ ನಿವಾಸಿ ತಿಪ್ಪೇಸ್ವಾಮಿ ನಾಪತ್ತೆಯಾದ ತಂದೆಯನ್ನು ಹುಡುಕಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
Laxmi News 24×7