Breaking News

ಜೆಸಿಬಿ ದುರಸ್ತಿ ವೇಳೆ ಅವಘಡ : ಚಾಲಕ ಮತ್ತು ಪೌರ ಕಾರ್ಮಿಕ ಸ್ಥಳದಲ್ಲೇ ಸಾವು

Spread the love

ವಿಜಯಪುರ : ಜೆಸಿಬಿ ದುರಸ್ಥಿ ಮಾಡುವ ವೇಳೆ ಸಂಭವಿಸಿದ ಅವಘಡದಲ್ಲಿ ಪೌರ ಕಾರ್ಮಿಕ ಹಾಗೂ ಜೆಸಿಬಿ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ನಗರದಲ್ಲಿ ಸಂಭವಿಸಿದೆ.

ದುರಸ್ಥಿ ಮಾಡುವಾಗ ಜೆಸಿಬಿಯಲ್ಲಿ ಸಿಲುಕಿ ಮೃತಪಟ್ಟವರನ್ನು 35 ವರ್ಷ ರಫೀಕ್ ಹಾಗೂ 50 ವರ್ಷ ಅಯೂಬ್ ಎಂದು ಗುರುತಿಸಲಾಗಿದೆ. ನಗರದ ಇಂಡಿ ರಸ್ತೆ ಬಳಿಯ ಇರುವ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ಘಟನೆ ಜರುಗಿದೆ.

ಜೆಸಿಬಿ ಯ ಹೈಡ್ರಾಲಿಕ್‍ನಲ್ಲಿ ದೋಷ ಕಂಟು ಬಂದಿದ್ದು ದುರಸ್ತಿಗಾಗಿ ಈ ಇಬ್ಬರೂ ಕೆಲಸದಲ್ಲಿ ತೊಡಗಿದ್ದರು. ಈ ಹಂತದಲ್ಲಿ ಜೆಸಿಬಿ ಯಂತ್ರ ಚಾಲನೆಗೊಂಡು, ಇಬ್ಬರೂ ಅದರ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ