ಮದ್ರಾಸ್ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಬ್ಯಾಗ್, ಪಠ್ಯ ಪುಸ್ತಕಗಳನ್ನು ವಿತರಿಸುತ್ತದೆ. ಈ ಸಾಮಾಗ್ರಿಗಳ ಮೇಲೆ ಮುಖ್ಯಮಂತ್ರಿ ಅಥವಾ ಇನ್ಯಾರೇ ರಾಜಕೀಯ ನಾಯಕರ ಚಿತ್ರಗಳನ್ನು ಮುದ್ರಿಸಬಾರದು ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಟಿ ಆದಿಕೇಶವಲು ಅವರ ನ್ಯಾಯಪೀಠವು ಆದೇಶ ಹೊರಡಿಸಿದೆ. ಮಕ್ಕಳಿಗೆ ಮತದಾನದ ಹಕ್ಕು ಇರುವುದಿಲ್ಲ. ಪುಸ್ತಕ, ಬ್ಯಾಗ್ ಎಲ್ಲದರಮೇಲೆಯೂ ರಾಜಕಾರಣಿಗಳ ಫೋಟೊ ನೋಡಿ ಮಕ್ಕಳು ಬೇಸರಿಸಿಕೊಳ್ಳುತ್ತಾರೆ ಎಂದು ಪೀಠ ಹೇಳಿದೆ.
ನಾಯಕರ ಚಿತ್ರ ಮುದ್ರಿಸಲು ಸಾರ್ವಜನಿಕರ ಹಣ ಬಳಸುವುದು ಸರಿಯಲ್ಲ, ಇದು ಮುಂದುವರಿಯದಿರಲಿ ಎಂದು ಪೀಠ ಹೇಳಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್ ಅವರು ಶಾಲಾ ಮಕ್ಕಳ ಬ್ಯಾಗ್ ಮೇಲೆ ಮುದ್ರಿಸಿರುವ ಮಾಜಿ ಸಿಎಂಗಳಾದ ಜೆ.ಜಯಲಲಿತಾ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಚಿತ್ರ ತೆಗೆಯದಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಚಿತ್ರ ಬದಲಿಸಿದರೆ ಬೊಕ್ಕಸಕ್ಕೆ ರೂ.13 ಕೋಟಿ ಹೊರೆಯಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.
Laxmi News 24×7