Breaking News

ವಿಜಯಪುರ ಜಿಲ್ಲೆಯಾದ್ಯಂತ ವರುಣನ ಆರ್ಭಟ

Spread the love

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರೀ ಮಳೆ ಸುರಿಯತೊಡಗಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ಎಡಬಿಡದೆ ಸುರಿಯತೊಡಗಿದ್ದು, ಇಡೀ ಜಿಲ್ಲೆ ಮಳೆನಾಡಿನಂತಾಗಿದೆ.

ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ತಿಕೋಟಾ, ಬಬಲೇಶ್ವರ, ಹೊರ್ತಿ, ಕೊಲ್ಹಾರ, ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗತೊಡಗಿದೆ.

ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಭಾರೀ ಮಳೆಯಿಂದ ಸಹಜ ಜನ ಜೀವನಕ್ಕೆ ಅಡಚಣೆಯಾಯಿತು.

ಜಿಲ್ಲೆಯಲ್ಲಿ ಇನ್ನೂ ಎರಡರಿಂದ ಮೂರು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ ವಿವರ:

ಅಗರಖೇಡದಲ್ಲಿ ಅತೀ ಹೆಚ್ಚು ಅಂದರೆ, 6.5 ಸೆಂ.ಮೀ. ಮಳೆಯಾಗಿದೆ. ಹಲಸಂಗಿ 5.6, ಕನ್ನೂರ 5, ರಾಮನಹಳ್ಳಿ 4.8, ಮಮದಾಪೂರ 4.1, ದೇವರಹಿಪ್ಪರಗಿ 4.7,ಹೋರ್ತಿ 3.8, ಭೂತನಾಳ 3.8, ಇಂಡಿ 3.8, ವಿಜಯಪುರ 2.7, ಬಸವನ ಬಾಗೇವಾಡಿ 1.6, ಮನಗೂಳಿ 3.2, ಹೂವಿನ ಹಿಪ್ಪರಗಿ 1.2, ಮಟ್ಟಿಹಾಳ 1.7, ಹಿಟ್ನಳ್ಳಿ 2.1, ತಿಕೋಟಾ 2.2, ಕುಮಟಗಿ 2.1, ಬಬಲೇಶ್ವರ 1.6, ನಾದ ಬಿ.ಕೆ. 2.4, ಚಡಚಣ 1.8, ಝಳಕಿ 1.6, ಸಿಂದಗಿ 2.6, ಆಲಮೇಲ 2.1, ಸಾಸಾಬಾಳ 1, ಕಡ್ಲೆವಾಡ 3 ಸೆಂ.ಮೀ.ಮಳೆಯಾಗಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ