Breaking News

ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಕಳ್ಳ

Spread the love

ಹುಬ್ಬಳ್ಳಿ: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿ ತನ್ನ ಮನೆತನದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ಪಟ್ಟಣದ ಮಂಗೇಶ ಕೆರೆ ದಂಡೆಯ ಬಳಿ ನಡೆದಿದೆ.

ಹನುಮಂತ ಈಶ್ವರಪ್ಪ ಧಾರವಾಡ ಮೃತನಾಗಿದ್ದಾನೆ. ಈತ ಕಲಘಟಗಿ ಪಟ್ಟಣದ ನಿವಾಸಿಯಾಗಿದ್ದಾನೆ. ಹನುಮಂತ ಹಾಗೂ ಆತನ ಗೆಳೆಯ ಮಲ್ಲಯ್ಯ ಹೆಬ್ಬಳ್ಳಿಮಠ ಜೊತೆಗೆ ಸೇರಿ ಅಂದಾಜು 2500 ಖಾಲಿ ಗೋಣಿ ಚೀಲಗಳನ್ನು ಆಗಸ್ಟ್ 28 ರಂದು ಕಳ್ಳತನ ಮಾಡಿ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರಿದ್ದರು.

ಈ ಕುರಿತು ಪ್ರಕರಣ ದಾಖಲಾದ ಕೆಲ ದಿನಗಳಲ್ಲೇ ಪೊಲೀಸರು ಮಲ್ಲಯ್ಯನನ್ನು ಬಂಧಿಸಿ, ಹನುಮಂತನ ಬಂಧನಕ್ಕೆ ಜಾಲ ಬೀಸಿದ್ದರು. ಈ ವಿಚಾರವಾಗಿ ಆತನ ಮನೆಗೆ ತೆರಳಿ ಪರಿಶೀಲನೆ ಸಹ ನಡೆಸಿದ್ದರು. ಈ ವಿಚಾರ ಅರಿತ ಹನುಮಂತ ಬಂಧನವಾದರೆ ತನ್ನ ಹಾಗೂ ಪಾಲಕರ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಕೆರೆ ದಂಡೆ ಮೇಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಹನುಮಂತನ ತಂದೆ ಈಶ್ವರಪ್ಪ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ