Breaking News

ಕರೋಡ್ ಪತಿಯಲ್ಲಿ ಸೆಹ್ವಾಗ್-ಗಂಗೂಲಿ: ಕ್ರಿಕೆಟ್ ದಿಗ್ಗಜರು ಗೆದ್ದಿದ್ದೆಷ್ಟು?

Spread the love

ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಇತ್ತೀಚಿಗಷ್ಟೆ ಕೌನ್ ಬನೇಗಾ ಕರೋಡ್ ​ಪತಿ ಸೀಸನ್ 13 ನಲ್ಲಿ ಭಾಗಿಯಾಗಿದ್ದರು. ವಾರದ ಮೊದಲೇ ಪ್ರೋಮೋ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ್ದ ಕೌನ್ ಬನೇಗಾ ಕರೊಡ್ ಪತಿ 13 ತಂಡ ಎಪಿಸೋಡ್ ನೋಡಲು ಕಾತರರಾಗಿದ್ದರು. ಇದೀಗ ಕಾರ್ಯಕ್ರಮ ಪ್ರಸಾರವಾಗಿದ್ದು ಇದೀಗ ವೈರಲ್ ಆಗುತ್ತಿದೆ.

ಶಾಂದರ್ ಶುಕ್ರವಾರ್ ದ ಮೊದಲ ಸೆಲೆಬ್ರಿಟಿ ಅತಿಥಿಗಳಾಗಿ ಸೆಹ್ವಾಗ್ ಮತ್ತು ಗಂಗೂಲಿ ಭಾಗವಹಿಸಿದ್ದರು. ಇಬ್ಬರು ಸಖತ್ತಾಗಿ ಆಟವಾಡಿದ್ದಾರೆ. ಅಂದಹಾಗೆ ಸೆಹ್ವಾಗ್ ಮತ್ತು ಗಂಗೂಲಿ ಇಬ್ಬರೂ 25 ಲಕ್ಷ ರೂ. ಗೆದ್ದಿದ್ದಾರೆ. 25 ಲಕ್ಷವನ್ನು ಚಾರಿಟಿಗೆ ನೀಡಿದ್ದಾರೆ.

ಹಾಟ್ ಸೀಟಿನಲ್ಲಿ ಕುಳಿತಿದ್ದ ಸೆಹ್ವಾಗ್ ಮತ್ತು ಗಂಗೂಲಿ ಇಬ್ಬರು ಅನೇಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದರು. ವಿಶೇಷ ಎಂದರೆ ಸೌರವ್ ಗಂಗೂಲಿ ಕೆಲವು ಸಮಯ ಅಮಿತಾಬ್ ಆಸನದಲ್ಲಿ ಕುಳಿತು ಪ್ರಶ್ನೆ ಮಾಡಿದರು. ಹಾಟ್ ಸೀಟಿನಲ್ಲಿ ಕುಳಿತ ಅಮಿತಾಬ್ ಆ ಕಷ್ಟವನ್ನು ಅರಿತುಕೊಂಡಿರುವುದಾಗಿ ಹೇಳಿದರು. ಅಂದಹಾಗೆ ಸೌರವ್ ಗಂಗೂಲಿ ಬಂಗಾಲಿ ವರ್ಷನ್ ಕರೋಡ್ ಪತಿ ಶೋ ನಡೆಸಿಕೊಟ್ಟಿದ್ದರು. ಹಾಗಾಗಿ ಅಮಿತಾಬ್ ಶೋನಲ್ಲು ಒಂದು ಝಲಕ್ ತೋರಿಸಿದರು. ಬಳಿಕ ಅಮಿತಾಬ್ ‘ನನ್ನ ಕೆಲಸ ಅಪಾಯದಲ್ಲಿದೆ’ ಎಂದು ಹೇಳಿದರು.

25 ಲಕ್ಷ ರೂ. ಗೆದ್ದ ಇಬ್ಬರು ದಿಗ್ಗಜ ಆಟಗಾರರು 50 ಲಕ್ಷ ರೂ. ಪ್ರಶ್ನೆಗೆ ಮುಂದಾದಾಗ ಸಮಯ ಅಂತ್ಯವಾಯ್ತು. 25 ಲಕ್ಷ ಗೆದ್ದ ಸೌರವ್ ಗಂಗೂಲಿ ಮತ್ತು ಸೆಹ್ವಾಗ್ ಪ್ರಶ್ನೆ ಇದಾಗಿತ್ತು. “1942 ರಲ್ಲಿ ಪ್ರಾರಂಭವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ರೇಡಿಯೋ, ಯಾವ ದೇಶದಲ್ಲಿ ಸೇವೆ ಆರಂಭಿಸಿತು?”. ವೀರು ಹಾಗೂ ದಾದಾ ಮುಂದೆ ಜಪಾನ್, ಜರ್ಮನಿ, ಸಿಂಗಾಪುರ್ ಮತ್ತು ಬರ್ಮಾ ಎಂಬ ನಾಲ್ಕು ಆಯ್ಕೆಗಳಿದ್ದವು. ಸರಿಯಾದ ಉತ್ತರ ಜರ್ಮನಿಯಾಗಿತ್ತು. ಅದನ್ನು ಉತ್ತರಿಸಿದ ಕಾರಣದಿಂದ ಕ್ರಿಕೆಟಿಗರು 25 ಲಕ್ಷ ರೂ. ಹಣವನ್ನು ತಮ್ಮದಾಗಿಸಿಕೊಂಡರು. ತಾವು ಗೆದ್ದ ಹಣವನ್ನು ಸಂಬಂದಪಟ್ಟ ಚಾರಿಟಿಗೆ ನೀಡುವುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಾಕಷ್ಟು ವಿಚಾರಗಳನ್ನು ಕ್ರಿಕೆಟ್ ದಿಗ್ಗಜರು ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಪಾಕಿಸ್ತಾನ ವಿರುದ್ಧ ಗೆದ್ದಾಗ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೆಹ್ವಾಗ್, 1988ರಲ್ಲಿ ಬಂದ ಶಹೆನ್ಶಾ ಚಿತ್ರದ ಪ್ರಸಿದ್ಧ ಡೈಲಾಗ್ ಇದೆ ಎಂದರು. ಅಮಿತಾಬ್, “ರಿಶ್ತೆ ಮೈನ್ ತು ಹಮ್ ತುಮ್ಹಾರೆ ಬಾಪ್ ಲಗ್ತಾ ಹೈ” ಎಂದು ಹೇಳಿದರು. ಬಳಿಕ ಸೆಹ್ವಾಗ್ “ಹಮ್ ತೋ ಬಾಪ್ ಹೈ ಉನ್ಕೋ” ಎಂದು ಡೈಲಾಗ್ ನೆನಪಿಸಿಕೊಂಡರು.

ಅಮಿತಾಬ್, ಸೆಹ್ವಾಗ್ ಬಳಿ ನೀವು ತುಂಬಾ ಹಾಡುಗಳನ್ನು ಗುನುಗುತ್ತಿರುತ್ತೀರಿ ಎಂದು ಕೇಳಿದ್ದೀನಿ ಎಂದು ಹೇಳಿದರು ಇದಕ್ಕೆ ಸೆಹ್ವಾಗ್ ಛಲ ಜಾತಾ ಹೂನ್ ಕಿಸಿಕೆ ಧುನ್ ಮೇ ಹಾಡನ್ನು ಹಾಡಿದರು. ಅಮಿತಾಬ್, ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಬಿಟ್ಟರೆ? ಎಂದು ಕೇಳುತ್ತಾರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸೆಹ್ವಾಗ್, ಕೋಚ್ ಗ್ರೆಗ್ ಚಾಪೆಲ್ ಆಗಿದ್ದರೆ ಎಂದು ಮತ್ತೊಂದು ಹಾಡನ್ನು ಹಾಡಿ ಅಮಿತಾಬ್ ಅವರನ್ನು ನಗೆಗಡಲಿನಲ್ಲಿ ತೇಲಿಸಿದರು. ಸಾಕಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಪ್ರೇಕ್ಷಕರ ಗಮನ ಸೆಳೆದಿದೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ