Breaking News

ಅತ್ಯಾಚಾರ ತಡೆದಿದ್ರೆ ಬೇಷ್ ಅನ್ನಬಹುದಿತ್ತು|ಸರ್ಕಾರ-ಪೊಲೀಸ್ ವಿರುದ್ಧ ಸಿದ್ಧರಾಮಯ್ಯ ಆಕ್ರೋಶ

Spread the love

ಮೈಸೂರು : ನಗರದಲ್ಲಿ ನಡೆದ ಗ್ಯಾಂಗ್ ರೇಪ್ ಬಹಳ ಹೇಯ ಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ. ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಕಿಡಿ ಕಾರಿದರು.

ಇಂದು (ಸೆ.01) ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು.

ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ. ಕಾನೂನು ವ್ಯವಸ್ಥೆ ಸರಿ ಮಾಡಲು ಸರಕಾರವಾಗಲಿ, ಪೊಲೀಸ್ ನವರಾಗಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಈ ವರೆಗೂ ಘಟನೆ ನಡೆದ ಸ್ಥಳ ಯಾರದ್ದು ಅಂತಾ ಗೊತ್ತಿಲ್ಲ. ಪೊಲೀಸರು ಕೇಳಿದ್ರೆ ಮುಡಾಗೆ ಪತ್ರ ಬರೆದಿದ್ದೇವೆ, ಉತ್ತರ ಬಂದಿಲ್ಲ ಅಂತಾರೇ. ಆ ಜಾಗದಿಂದ ರಿಂಗ್ ರಸ್ತೆಗೆ ಎಷ್ಟು ದೂರ ಇದೆ ಅಂತಾ ಇವತ್ತಿನ ವರೆಗೂ ಅಳತೆ ಮಾಡಿಸಿಲ್ಲ ಎಂದರು.

ಅತ್ಯಾಚಾರಿಗಳು ತನ್ನನ್ನು ಕಲ್ಲಿನಲ್ಲಿ ಹೊಡೆದಿದ್ದಾರೆ ಯುವತಿ ಜೊತೆಯಿದ್ದ ಯುವಕ ಸ್ಟೇಟ್ ಮೆಂಟ್ ಕೊಟ್ಟಿದ್ದಾನೆ. ಆ ಹುಡುಗಿಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಸ್ಟೇಟ್ ಮೆಂಟ್ ಹಲ್ಲೆ ಮತ್ತು ರೇಪ್ ಮಾಡಿದ್ದಾರೆ ಅಂತಾ ಕೊಟ್ಟಿದ್ದಾರೆ. ಆಸ್ಪತ್ರೆಯವ್ರು ಇಬ್ಬರನ್ನೂ ಅಡ್ಮಿಟ್ ಮಾಡಿಕೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ನಡೆದ 15 ಗಂಟೆಗಳ ಬಳಿಕ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಪ್ರಕರಣವನ್ನ ದಾಖಲು ಮಾಡಲು ವಿಳಂಬ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನ ಮೂಡಿಸಿದೆ‌ ಎಂದರು.

ಸಂತ್ರಸ್ಥೆ ಜೊತೆಗಿದ್ದ ಹುಡುಗನ ಹೆಸರು ಹೇಳಿದ ಸಿದ್ದರಾಮಯ್ಯ : ಇನ್ನು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಸಿದ್ದರಾಮಯ್ಯನವರು ಸಂತ್ರಸ್ಥೆ ಜೊತೆಗಿದ್ದ ಹುಡುಗನ ಹೆಸರು ಹೇಳಿದರು. ಪಕ್ಕದಲ್ಲಿದ್ದವರು ಹೇಳಬೇಡ ಅಂತಾ ಸೂಚಿಸಿದರೂ ಅವರ ಮೇಲೇ ಗರಂ ಆದ ಸಿದ್ದರಾಮಯ್ಯ, ಹುಡುಗ ನ ಹೆಸರು ಹೇಳಬಹುದು, ಹುಡುಗಿ ಹೆಸರು ಹೇಳಬಾರದು.

ಗೃಹ ಮಂತ್ರಿ ವಿರುದ್ಧ ವಾಗ್ದಾಳಿ :

ಹೋಂ ಮಿನಿಸ್ಟರ್ ಮೈಸೂರಿಗೆ ಬರ್ತಾನೆ. ಮೇಜರ್ ಕ್ರೈಂ ಆಗಿದೆ ಅಂತಾ ಬೆಂಗಳೂರಿನಲ್ಲಿ ಹೇಳಿ ಬರ್ತಾರೆ. ಆದ್ರೆ ಬಂದು ಮಾಡಿದ್ದೇನೆ ?‌ ಬಂದು ಇಲ್ಲಿ ಉಳಿದು ಕೊಂಡ್ರು, ಪೊಲೀಸ್ ಅಕಾಡೆಮಿಗೆ ಹೋದ್ರು, ಗನ್ ಇಡ್ಕೊಂಡು ಪೋಸ್ ಕೊಟ್ರು, ಆ ಮೇಲೆ ಸ್ಥಳಕ್ಕೆ ಹೊಗ್ತಾರೆ. ನಂತರ ಚೆಲ್ಡಿಸ್ಟ್ ಸ್ಟೇಟ್ ಮೆಂಟ್ ಕೊಡ್ತಾರೆ‌. ಕೂಡಲೇ ಬೇಜವಬ್ದಾರಿ ಹೋಂ ಮಿನಿಸ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಈ ವರೆಗೂ ಆ ಸಂತ್ರಸ್ತೆಯ ಹೇಳಿಕೆ ಪಡೆದಿಲ್ಲ. ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಪಡೆದಿಲ್ಲ. ಹೇಳಿದ್ರೆ ಶಾಕ್ ನಲ್ಲಿ ಇದ್ರು ಹೀಗಾಗಿ ಸ್ಟೇಟ್ ಮೆಂಟ್ ಪಡೆದಿಲ್ಲ ಅಂತಾರೇ. ಸಂತ್ರಸ್ತೆಯ ಅಪ್ಪ ಕೂಡ ಹೇಳಿಕೆಯನ್ನ ಕೊಡಿಸಲು ಮುಂದಾಗಿಲ್ಲ ಅಂದ್ರು. ಕಡ್ಡಾಯವಾಗಿ ಸಂತ್ರಸ್ತೆಯ ಹೇಳಿಕೆ ಪಡೆಯಬೇಕಿತ್ತು. ಯಾವಾಗ ಹೇಳಿಕೆ ಕೊಡಲಿಲ್ಲ ಅಂತಾ ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ್ದಳೋ, ಅವಾಗ ಆಕೆಯ ಮೇಲೆ ಕೇಸ್ ಮಾಡಬಹುದಿತ್ತು. ಇದಕ್ಕೆ ಕಾನೂನಿನ ಅಡಿಯಲ್ಲಿ ಅವಕಾಶ ಇದೆ‌.

ಸ್ಟೇಟ್ ಮೆಂಟ್ ನೀಡಲು ವಿರೋಧಿಸಿದ್ರು ಅಂತಾ ಬಲವಂತ ಮಾಡಿ ಅಂತಾ ಹೇಳಲ್ಲ. ಆದ್ರೆ ಆಕೆಯನ್ನ ಮನವೊಲಿಸಿ ಸ್ಟೇಟ್ ಮೆಂಟ್ ಪಡೆಯಬಹುದಿತ್ತಲ್ಲ‌. ಪೊಲೀಸರು ಇದ್ಯಾವುದನ್ನೂ ಮಾಡಿಲ್ಲ‌. ಇದು ಪೊಲೀಸ್ ಇಲಾಖೆಯ ವೈಫಲ್ಯ ತೋರಿಸುತ್ತದೆ. ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಬೆನ್ನು ತಟ್ಟಿಕೊಳ್ತಾ ಇದ್ದಾರೆ. ಸಿಎಂ,ಗೃಹಸಚಿವರು ಪೋಲಿಸರಿಗೆ ಅಭಿನಂದನೆ ಹೇಳುತ್ತಿದ್ದಾರೆ. ಇವರು ಗ್ಯಾಂಗ್ ರೇಪ್ ತಡೆದಿದ್ರೆ ಬೇಷ್ ಅನ್ನಬಹುದಿತ್ತು. ಇದು ಪೊಲೀಸ್ ಇಲಾಖೆ ವೈಫಲ್ಯ .ಮೈಸೂರು ನಗರ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಪೊಲೀಸರು ಗಸ್ತು ತಿರುಗುತ್ತಾ ಇದ್ರೆ ಘಟನೆ ತಪ್ಪಿಸಲು ಸಾಧ್ಯವಾಗುತ್ತಿತ್ತು ಎಂದರು.


Spread the love

About Laxminews 24x7

Check Also

ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಅಜ್ಜಪ್ಪ ಸನದಿ ಇವರ ಟಗರು ಪ್ರಥಮ ಸ್ಥಾನ ಪಡೆದುಕೊಂಡಿತು.

Spread the love ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ