ಚಿಕ್ಕೋಡಿ/ಬೆಳಗಾವಿ: ನೀರು ಹಾಯಿಸಲು ಬಾವಿಯ ಮೋಟರ್ ಸ್ಟಾರ್ಟ್ ಮಾಡಲು ಹೋಗಿ ಸಹೋದರಿಬ್ಬರು ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದ ಬಡಿಗೇರ ತೋಟದಲ್ಲಿ ನಡೆದಿದೆ.

ಬಾವಿಗೆ ಅಳವಡಿಸಲಾಗಿದ್ದ ನೀರೆತ್ತುವ ಮೋಟರ್ ನ್ನು ಬೆಳಗ್ಗೆ ಸ್ಟಾರ್ಟ್ ಮಾಡಲು ಹೋಗಿ ರಾಜು ಬಾಳಪ್ಪ ಬಡಿಗೇರ ಹಾಗೂ ಸಹೋದರ ಶಂಕರ್ ರಾಮಪ್ಪ ಬಡಿಗೇರ ಸಾವೀಗಿಡಾಗಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದು, ಆಕಸ್ಮಿಕವಾಗಿ ವಿದ್ಯುತ್ ಮೋಟರ್ ಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹಾಗೂ ಮೃತ ಸಹೋದರರ ಸಂಬಂಧಿಕರು ತಿಳಿಸಿದ್ದಾರೆ. ರಾಮ-ಲಕ್ಷ್ಮಣರಂತೆ ಒಂದಾಗೇ ಇರುತ್ತಿದ್ದ ಅಣ್ಣ, ತಮ್ಮನ ಏಕಾಏಕಿ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಕುರಿತು ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7