Breaking News

ಶೂ ಹಾಕಿಕೊಂಡೇ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದ ಸಚಿವ ಪ್ರಭು ಚೌಹಾಣ್

Spread the love

ಹಾವೇರಿ:ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಎಡವಟ್ಟು ಮಾಡಿಕೊಂಡಿದ್ದಾರೆ.ದೇಗುಲದ ಒಳಗೇ ಶೂ ಹಾಕಿಕೊಂಡು ದೇವರ ದರ್ಶನ ಪಡೆದಿದ್ದಾರೆ.ಹಾವೇರಿ‌ ಜಿಲ್ಲೆಯ ಶಿಗ್ಗಾವಿಯ ಬಂಕಾಪುರ ಪಟ್ಟಣದಲ್ಲಿ ನಡೆದಿರುವ ಘಟನೆ .

ಬಂಕಾಪುರದ ಪ್ರಸಿದ್ಧ ನಗರೇಶ್ವರ ದೇವಾಲಯದ ಒಳಗೆ ಶೂ ಹಾಕಿಕೊಂಡು ಹೋಗಿ ದೇವರ ದರ್ಶನ ಪಡೆದ ಚೌಹಾಣ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಜಿಲ್ಲೆಯು ಪ್ರವಾಸ ಕೈಗೊಂಡಿರುವ ಪಶು ಸಂಗೋಪನೆ ಸಚಿವರಾದ ಪ್ರಭು ಚೌಹಾಣ್ ರವರು ಹಾವೇರಿ ಪ್ರವಾಸದಲ್ಲಿ ಇದ್ದಾರೆ. ಈ ಮಧ್ಯೆ ಅವರು ಬಂಕಾಪುರದ ಗೊ ಶಾಲೆಗೆ ಹೋಗಿ ಪರಿಶೀಲನೆ ಮಾಡ್ತಾರೆ.ಪಕ್ಕದಲ್ಲೇ ಇರುವ ದೇಗುಲದಲ್ಲಿ ಶೂ ಹಾಕಿಕೊಂಡು ದೇವರ ದರ್ಶನ ಪಡೆದು ವಿವಾದಕ್ಕೆ ಗುರಿಯಾಗಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಸಿಂಗಾರಗೊಂಡ ಬೆಳಗಾವಿ: ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ

Spread the loveಬೆಳಗಾವಿ: ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ರಾಣಿ ಚನ್ನಮ್ಮ ವೃತ್ತ ಮದುವಣಗಿತ್ತಿಯಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ