ಹುಣಸೂರು: ಮರದ ದಿಮ್ಮಿ ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಡಿಕ್ಕಿ, ಬಸ್‌ ಚಾಲಕನಿಗೆ ಗಂಭೀರ ಗಾಯ

Spread the love

ಹುಣಸೂರು: ರಸ್ತೆ ಪಕ್ಕದಲ್ಲಿ ನಿಂತಿದ್ದ ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದ್ದು, ಬಸ್‌ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲ್ಬೆಟ್ಟ ಬಳಿ ನಡೆದಿದೆ.

ಬಸ್‌ ಚಾಲಕ ಎಚ್‌.ಬಿ.ಮಹದೇವ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹುಣಸೂರಿನ ಕಡೆ ಹೊರಟಿತ್ತು. ಈ ವೇಳೆ ಕಲ್ಬೆಟ್ಟದ ಬಳಿ ನಿಂತಿತ್ತು. ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ, ಬಸ್‌ ಮುಂಭಾಗ ಜಖಂಗೊಂಡಿದೆ.

ಹುಣಸೂರು ಗ್ರಾಮಾಂತರ ಪೋಲೀಸರು ಲಾರಿ ಮತ್ತು ಸಾರಿಗೆ ಬಸ್‌ ಅನ್ನು ವಶಕ್ಕೆ ಪಡೆದು ಕ್ರಮಜರುಗಿಸಿದ್ದಾರೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ