ಬೆಂಗಳೂರು : ಶೋಭಾ ಕರಂದ್ಲಾಜೆ ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಅಂತಾರೆ. ಸಚಿವೆ ಆದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಆದರೆ ನಮ್ಮ ಮನೆಯಲ್ಲಿ ಆದರೆ ಹೀಗೆ ಮಾತಾಡೋದ? ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಪ್ರಕರಣವು ಪೊಲೀಸರ ಗಮನಕ್ಕೆ ಬಂದರೂ ಕೇಸ್ ದಾಖಲಿಸಲು ತಡ ಮಾಡಿದ್ದಾರೆ. ಮೈಸೂರಿನಂತ ನಗರದಲ್ಲಿ ಅತ್ಯಾಚಾರ ಆಗಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಆಯ್ತು ಅಂತ ಕೆಟ್ಟ ಹೆಸರು ಬರಬಾರದು ಅಂತ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ಕೇಸು ದಾಖಲಿಸಲು ತಡ ಮಾಡಿದೆ ಎಂದು ಆರೋಪಿಸಿದರು. ಇಡೀ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆ. ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಹೆಚ್.ಎಂ.ರೇವಣ್ಣ ಆಗ್ರಹಿಸಿದರು.
Laxmi News 24×7