ತುಮಕೂರು: ಮಹಿಳೆಯೋರ್ವಳ ಶವ ಬೆತ್ತಲೆಯಾಗಿ ಪತ್ತೆಯಾಗಿರುವ ಘಟನೆ ತುಮಕೂರು ತಾಲೂಕಿನ ಹೀರೇಹಳ್ಳಿ ಸಮೀಪದ ಚೋಟಾಸಾಬರ ಪಾಳ್ಯದ ಬಳಿ ನಡೆದಿದೆ.
35 ವರ್ಷದ ಜಯಲಕ್ಷ್ಮಿ ಕೊಲೆಯಾಗಿರುವ ಮಹಿಳೆ. ನಿನ್ನೆ ಬೆಟ್ಟದ ಮೇಲೆ ಹಸು ಮೇಯಿಸಲು ಜಯಲಕ್ಷ್ಮೀ ಒಬ್ಬರೇ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ವಾಪಸ್ ಬರದೇ ಇದ್ದದನ್ನು ನೋಡಿ ಪತಿ ಶಿವಕುಮಾರ್ ಹುಡುಕಾಟ ಶುರುಮಾಡಿದ್ದಾರೆ.
ಆಗ ಬೆಟ್ಟದ ಮೇಲಿನ ಪೊದೆಯಲ್ಲಿ ಜಯಲಕ್ಷ್ಮೀಯ ಬೆತ್ತಲೆಯಾಗಿ ಬಿದ್ದಿದ್ದ ಮೃತದೇಹ ಕಂಡು ಬೆಚ್ಚಿಬಿದ್ದಿದಾರೆ. ಜೊತೆಗೆ ಮೃತ ದೇಹದ ಮೇಲೆ ಕಚ್ಚಿದ ಗಾಯದ ಕಲೆಗಳು ಕಂಡುಬಂದಿದೆ. ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತೊಯ್ದಿದ್ದು, ಅಪರಿಚಿತ ಯುವಕರ ಗುಂಪು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Laxmi News 24×7