Breaking News

ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದ್ದಾನೆ ‘ಕೋಟಿಗೊಬ್ಬ-3’

Spread the love

ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಶಿವ ಕಾರ್ತಿಕ್ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ.

ಸೆಪ್ಟಂಬರ್ 2 ರಂದು ಸುದೀಪ್ ಹುಟ್ಟುಹಬ್ಬವಿದ್ದು, ಅಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ. ಮಾರ್ಚ್‌ನಲ್ಲಿ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಿದ್ದ ಚಿತ್ರತಂಡ ಏಪ್ರಿಲ್ ಕೊನೆಯ ವಾರದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿತ್ತು, ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಬಿಡುಗಡೆಯ ಡೇಟ್ ಮುಂದೂಡಲಾಯಿತು.

ಈಗ ಚಿತ್ರಮಂದಿರಗಳು ಶೇ 100 ಸಾಮರ್ಥ್ಯದಲ್ಲಿ ಪುನಃ ತೆರೆಯಲ್ಪಡುತ್ತಿರುವುದರಿಂದ ಕೋಟಿಗೊಬ್ಬ 3 ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಚಿತ್ರದ ಸ್ಯಾಟಲೈಟ್, ಡಿಜಿಟಲ್ ಮತ್ತು ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

ಈ ಚಿತ್ರದ ಮೂಲಕ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಕೋಟಿಗೊಬ್ಬ 3 ಸಿನಿಮಾದಲ್ಲಿ ಬಾಲಿವುಡ್ ನಟರಾದ ಶ್ರದ್ಧ ದಾಸ್, ಅಫ್ತಾಬ್ ಶಿವದಾಸನಿ ಮತ್ತು ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ