ಬೆಂಗಳೂರು: ಮಾರಕ ಕೊರೋನಾ ಲಾಕ್ಡೌನ್ನಿಂದ ಶಾಲಾ ಕಾಲೇಜುಗಳನ್ನು ಸುಮಾರು ಎರಡು ವರ್ಷಗಳಿಂದ ಬಂದ್ ಮಾಡಿದ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯ ಅದೋಗತಿಗೆ ತಲುಪಿದೆ. ಪೋಷಕರು ಯಾವುದೇ ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗಲೇ ಡಿಜಿಟಲ್ ವೆಬ್ಸೈಟ್ ಒಂದು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೇವಲ 10 ರೂಪಾಯಿಗಳಿಗೆ ಎಲ್ಲಾ ರೀತಿಯ ಪಠ್ಯಪುಸ್ತಕಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ.
ಹೌದು, ಇಂಗ್ಲೀಷ್ ಮತ್ತು ಮ್ಯಾಥ್ಸ್ ವರ್ಕ ಬುಕ್ಸ್ ಸೇರಿದಂತೆ ಎಲ್ಲಾ ರೀತಿಯ ಪಠ್ಯಪುಸ್ತಕಗಳು ಕೇವಲ ಹತ್ತು ರೂಪಾಯಿಗಳಿಗೆ ಲಭ್ಯವಾಗಲಿವೆ. NCERT, SCERT ಸಿಲಬಸ್ನಿಂದ ಹಿಡಿದರು ಸ್ಟೇಟ್ತನಕ 1-12ನೇ ತರಗತಿವರೆಗೂ ಪಠ್ಯಪುಸ್ತಕಗಳ ಪಿಡಿಎಫ್ www.Grade 1to6.com/class1to12 ಡಿಜಿಟಲ್ ವೆಬ್ಸೈಟಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೀಗೊಂದು ಪ್ರಾಜೆಕ್ಟ್ ಲಾಂಚ್ ಮಾಡಿದ ಒಂದೇ ತಿಂಗಳಿನಲ್ಲಿ ದೇಶದ 20 ಸಾವಿರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಲಕ್ಷಾಂತರ ಪುಸ್ತಕಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಈ ಡಿಜಿಟಲ್ ವೆಬ್ಸೈಟ್ ಸಂಸ್ಥಾಪಕರಾದ ಬಾಲಜಿಯವರು ತಿಳಿಸಿದ್ದಾರೆ.
Laxmi News 24×7