ಪಣಜಿ: ಪ್ರವಾಸಿ ರಾಜ್ಯ ಗೋವಾದಲ್ಲಿ ಮೊದಲ ಆಲ್ಕೋಹಾಲ್ ಮ್ಯೂಸಿಯಂ ತೆರೆಯಲಾಗಿದೆ. ಸ್ಥಳೀಯ ವಿಶೇಷ ಮದ್ಯವೆನಿಸಿಕೊಂಡಿರುವ ಫೆನ್ನಿಯ ಪ್ರಸಿದ್ಧತೆಯನ್ನು ದೇಶ ವಿದೇಶಕ್ಕೆ ಹರಡಿಸುವ ಉದ್ದೇಶದೊಂದಿಗೆ ಈ ಮ್ಯೂಸಿಯಂ ತೆರೆಯಲಾಗಿದೆ.
ಉದ್ಯಮಿ ನಂದನ್ ಕುಡcಡ್ಕರ್ “ಆಲ್ ಎಬೌಟ್ ಆಲ್ಕೋಹಾಲ್’ ಹೆಸರಿನ ಮ್ಯೂಸಿಯಂ ತೆರೆದಿದ್ದಾರೆ. ಕಾಂಡೋಲಿಮ್ ಬೀಚ್ ಗ್ರಾಮದ ಬಳಿ ಈ ಮ್ಯೂಸಿಯಂ ಇದೆ. ಇದರಲ್ಲಿ ವಿಶೇಷವಾಗಿ ಪೆನ್ನಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಪ್ರದರ್ಶಿಸಲಾಗುವುದು. ಹಿಂದಿನ ಕಾಲದಲ್ಲಿ ಪೆನ್ನಿಯನ್ನು ಸಂಗ್ರಹಿಸುಡುತ್ತಿದ್ದ ಬೃಹದಾಕಾರದ ಹೂಜಿಗಳು, ಪೆನ್ನಿಗೆ ಸಂಬಂಧಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಈ ಮ್ಯೂಸಿಯಂ ಮೂಲಕ ಗೋವಾದ ಪರಂಪರೆ ಮತ್ತು ಪೆನ್ನಿಯ ಮೂಲ, ಅದು ಬ್ರೆಜಿಲ್‌ನಿಂದ ಗೋವಾಕ್ಕೆ ಬಂದಿದ್ದು ಹೇಗೆ ಎಂಬೆಲ್ಲ ಮಾಹಿತಿಯನ್ನೂ ಜನರಿಗೆ ತಿಳಿಸಿಕೊಡುವುದಾಗಿ ನಂದನ್ ಹೇಳಿದ್ದಾರೆ.
ಪೆನ್ನಿ ಗೋವಾದಲ್ಲೇ ತಯಾಗುತ್ತಿರುವ ಮದ್ಯ. ಅದನ್ನು ರಾಜ್ಯದ ಪಾರಂಪರಿಕ ಮದ್ಯ ಎಂದು ಸರಕಾರ 2016ರಲ್ಲಿ ಗುರುತಿಸಿದೆ. 1700ರ ಸಮಯದಲ್ಲಿ ಪೋರ್ಚುಗೀಸರು ಬ್ರೆಜಿಲ್‌ನಿಂದ ಗೇರು ಬೀಜವನ್ನು ತಂದು ಗೋವಾದಲ್ಲಿ ಅದರ ಬೆಳೆ ಆರಂಭಿಸಿದರು. ನಂತರ ಗೇರು ಹಣ್ಣುಗಳಿಂದಲೇ ಪೆನ್ನಿ ಮದ್ಯ ತಯಾರಿಸಲಾರಂಭಿಸಲಾಯಿತು. ಗೇರು ರಸವನ್ನು ಎರಡು ಬಾರಿ ಡಿಸ್ಟಿಲ್ ಮಾಡಿ ಅದಕ್ಕೆ ಕೆಲ ಸಾಮಾಗ್ರಿಗಳನ್ನು ಸೇರಿಸಿ ಪೆನ್ನಿ ತಯಾರಿಸಲಾಗುತ್ತದೆ. ಗೋವಾದ ಜನರು ಅತಿ ಹೆಚ್ಚು ಬಳಸುವ ಮದ್ಯದಲ್ಲಿ ಇದು ಮೊದಲಿದೆ. ಅದಕ್ಕೆಂದೇ ವಿಶೇಷ ಬಾರ್‌ಗಳೂ ಅಲ್ಲಿವೆ.
Laxmi News 24×7