Breaking News

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

Spread the love

ಚಿಕ್ಕೋಡಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದುಕೊಂಡು ನಮ್ಮ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ ಅವಳ ಮುಂದಿನ ವಿದ್ಯಾಭ್ಯಾಸದ ಸಮಗ್ರ ಖರ್ಚು ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂದು ಸಿಎಲ್‍ಇ ಸಂಸ್ಥೆ ಕಾರ್ಯದರ್ಶಿ ಜಗದೀಶ ಕವಟಗಿಮಠ ತಿಳಿಸಿದರು.

ಇಲ್ಲಿನ ಸಿಎಲ್‍ಇ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ ಪಡೆದ ಎಂ.ಕೆ.ಕವಟಗಿಮಠ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡ ಅವಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂಗಲದ ವಾತಾವರಣದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸಿರಲಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ನಮ್ಮ ಶಾಲೆಯ ವಿದ್ಯಾರ್ಥಿನಿ ಸಹನಾ ಕಾಮಗೌಡ ಇವಳು 625 ಅಂಕಗಳ ಪೈಕಿ 623 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ರ್ಯಾಂಕ ಪಡೆದು ಸಾಧನೆ ಮಾಡಿರುವುದು ನಮೆಗೆಲ್ಲ ಹೆಮ್ಮೆಯ ವಿಷಯವಾಗಿದೆ. ಹೀಗಾಗಿ ಅವಳನ್ನು ಸಿಎಲ್‍ಇ ಸಂಸ್ಥೆ ದತ್ತು ಪಡೆದುಕೊಂಡು ಅವಳ ಮುಂದಿನ ವಿದ್ಯಾಭ್ಯಾಸದ ಸಮಗ್ರ ಖರ್ಚು ವೆಚ್ಚವನ್ನು ಸಂಸ್ಥೆಯೇ ಬರಿಸಲಿದೆ ಎಂದು ತಿಳಿಸಿದರು.

ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದು ಎಂಬುದನ್ನು ಸಹನಾ ಕಾಮಗೌಡ ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಯಲ್ಲಿ ರ್ಯಾಂಕ ಪಡೆದವರಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ರಂಗಗಳತ್ತ ಗಮನ ಹರಿಸದೇ ಐಎಎಸ್ ಮತ್ತು ಕೆಎಎಸ್‍ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳತ್ತಲೂ ಗಮನ ಹರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಂ.ಕೆ.ಕವಟಗಿಮಠ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಿ.ಡಿ. ರುಕಡೆ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಚನ್ನವರ, ಮಹಾಂತೇಶ ಭಾತೆ, ಎಸ್.ಎಸ್.ಪಾಟೀಲ, ಶಿವಾನಂದ ಚೊನ್ನದ, ಸಾಗರ ಬೀಸ್ಕೋಪ್ಪ, ಜಗದೀಶ ಕಾದ್ರೋಳಿ, ಪ್ರಕಾಶ ಚನ್ನವರ, ಡಾ. ಸುರೇಶ ಉಕಲಿ, ಡಿ.ಎಸ್.ಕೋಳಿ ಮುಂತಾದವರು ಉಪಸ್ಥಿತರಿದ್ದರು.

– ಎಂ. ಕೆ. ಕವಟಗಿಮಠ ಕನ್ನಡ ಪ್ರೌಢ ಶಾಲೆ ( ಒಟ್ಟು ಫಲಿತಾಂಶ 99% )
ಪ್ರಥಮ    –     ಸಹನಾ ಕಾಮಗೌಡರ            623/625     99.68%
ದ್ವಿತೀಯ    –    ಸಾಕ್ಷೀ ಕಡ್ಲಿಬುಡ್ಡಿ            607/625    97.12%
ತೃತೀಯ    –    ಪೃಥ್ವಿ ಬಸ್ತವಾಡೆ            595/625    95.20%

– ಕೆ. ಕೆ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ  ( ಒಟ್ಟು ಫಲಿತಾಂಶ 85.45% )

ಪ್ರಥಮ    –     ಕಮರುನಿಸ್ಸಾ. ಆರ್. ಮಕಾಂದಾರ    615/625     98.40%
ದ್ವಿತೀಯ    –    ಸಾಯಿದೀಪ. ಎಸ್. ಕವಟಗಿಮಠ    608/625    97.28%
ತೃತೀಯ    –    ಪ್ರವೀಣ. ಯು. ಕೂಗೆ            586/625    93.76%

– ಸಿ. ಎಸ್. ಎಸ್. ಪ್ರೌಢ ಶಾಲೆ  ( ಒಟ್ಟು ಫಲಿತಾಂಶ 57.58% )

ಪ್ರಥಮ    –     ಆನಂದ. ಬಿ. ಅರಭಾವಿ        590/625     94.40%
ದ್ವಿತೀಯ    –    ನಳನಿ. ಎ. ಕೋಳಿ            589/625    94.24%
ತೃತೀಯ    –    ಆಶಫಿಯಾ. ಆರ್. ಗೌಂಡಿ         583/625    93.28%

– ಕೆ. ಎಮ್. ಬೆಲ್ಲದ ಪ್ರೌಢ ಶಾಲೆ ಕಬ್ಬೂರ ( ಒಟ್ಟು ಫಲಿತಾಂಶ 63.36% )

ಪ್ರಥಮ    –     ಸಾನಿಯಾ. ಎ. ಮಕಾಂದಾರ        573/625     91.68%
ದ್ವಿತೀಯ    –    ರಾಜಶ್ರೀ. ಎಮ್. ಕಾಮತ         570/625    91.20%
ತೃತೀಯ    –    ಆಕಾಶ. ಎಸ್. ಮದ್ರಾಶಿ         548/625    87.68%


Spread the love

About Laxminews 24x7

Check Also

ಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ..

Spread the loveಶಿರಗುಪ್ಪಿಯಲ್ಲಿ ರಕ್ತದಾನ ಶಿಬಿರ; ಡಾ.ಅಮೋಲ ಸರಡೆ ಅವರ ಕಾರ್ಯ ಶ್ಲಾಘನೀಯ: ರಾಜು ಕಾಗೆ.. ! ತಮ್ಮ ಹುಟ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ