Breaking News

ಮಹದಾಯಿ ಹೋರಾಟದಿಂದ ಅಧಿಕಾರಕ್ಕೆ ಬಂದಿದ್ದೇವೆ,ಮಹದಾಯಿ ಕೈತಪ್ಪಲು ಬಿಡುವುದಿಲ್ಲ : ಸಚಿವ ಮುನೇನಕೊಪ್ಪ

Spread the love

ಹುಬ್ಬಳ್ಳಿ : ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ರಾಜ್ಯದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮಹದಾಯಿ ಮೂರು ರಾಜ್ಯಗಳ ಅಂತರಾಜ್ಯ ಸಮಸ್ಯೆ. ಹೀಗಾಗಿ ಕಾನೂನಾತ್ಮಕವಾಗಿ ಆ ಪ್ರಕ್ರಿಯೆ ಮುಂದುವರೆದಿದೆಈಗಾಗಲೇ 1677 ಕೋಟಿ ಮಹದಾಯಿಗಾಗಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಡಿಪಿಆರ್ ಮಾಡಲು ಸಿಡಬ್ಲ್ಯುಸಿಗೆ ಅನುಮತಿ ಕೇಳುವ ಪ್ರಯತ್ನದಲ್ಲಿದ್ದೇವೆ ಎಂದರು.

ಮಹದಾಯಿ ಹೋರಾಟದಿಂದ ನಾವೆಲ್ಲ ಅಧಿಕಾರಕ್ಕೆ ಬಂದಿದ್ದೇವೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿ.ಸಿ. ಪಾಟೀಲ ಮತ್ತು ನಾನು ಮಹದಾಯಿ ಹೋರಾಟದಿಂದ ಬೆಳೆದವರು. ಆ ಜವಾಬ್ದಾರಿ ಅರಿತು ಕಾರ್ಯ ಮಾಡುತ್ತೇವೆ. ಚರ್ಚೆಗಳಿಂದ ಪುನಃ ಗೊಂದಲ ಸೃಷ್ಟಿಯಾಗಿ ಕೆಲಸಕ್ಕೆ ಅಡೆ ತಡೆಯಾಗುವುದು ಬೇಡ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಶಾಸಕ ಅಮೃತ ದೇಸಾಯಿ,ಕರ್ನಾಟಕ ರಾಜ್ಯ ಹೆದ್ದಾರಿ ರೇಷ್ಮೆ ಮಾರಾಟ ಮಂಢಳಿ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಉಪಸ್ಥಿತರಿದ್ದರು.


Spread the love

About Laxminews 24x7

Check Also

ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ

Spread the love ನಾಗನೂರು ಪಟ್ಟಣದಲ್ಲಿ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಟೂರ್ನಿಯಲ್ಲಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಭಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ