Breaking News

ಸಂಗೊಳ್ಳಿ ರಾಯಣ್ಣ ಜನ್ಮ ದಿನ, ಹುತಾತ್ಮರ ದಿನ ಆಚರಣೆಗೆ ರಾಜ್ಯ ಸರ್ಕಾರದ ಆದೇಶ

Spread the love

ಬೆಂಗಳೂರು: ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ ಆಗಸ್ಟ್ 15 ಹಾಗೂ ಹುತಾತ್ಮ ದಿನ ಜನವರಿ 26ರ ದಿನದಂದು ರಾಜಧಾನಿ ಮತ್ತು ಎಲ್ಲ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಸರ್ಕಾರಿ ಗೌರವ ಸಲ್ಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ ಆಗಸ್ಟ್ 15 ಹಾಗೂ ಹುತಾತ್ಮ ದಿನ ಜನವರಿ 26 ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಸರ್ಕಾರದ ಸಕಲ ಗೌರವದೊಂದಿಗೆ ಪೂಜೆ ಸಲ್ಲಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರಿಯ ಸಂಗೊಳ್ಳಿ ರಾಯಣ್ಣ ಸೇನೆ ನಂದಗಡದಿಂದ ಬೆಂಗಳೂರು ವಿಧಾನಸೌಧಕ್ಕೆ ಜುಲೈ 24 ರಿಂದ ಆಗಸ್ಟ್ 11 ರವರೆಗೆ ಪಾದಯಾತ್ರೆಯನ್ನು ನಡೆಸಿತ್ತು..

ಹಿರಿಯ ಮುಖಂಡರಾದ ಕೆ. ಮುಕುಡಪ್ಪ. ಮತ್ತು ಸಮಾಜ ಸೇವಕರಾದ ಚಿಕ್ಕರೇವಣ್ಣನವರು ಸೇರಿದಂತೆ ಸೇನೆಯ ಕಾರ್ಯಕರ್ತರು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಈ ಕುರಿತು ಮನವಿ ಮಾಡಲಾಗಿತ್ತು. ಸಂಘಟನೆಯ ಮನವಿಗೆ ಸ್ಪಂದಿಸಿದ ಅವರು ಈ ಆದೇಶ ಹೊರಡಿಸಿದ್ದು ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ರಾಯಣ್ಣ ಸೇನೆ ಅರ್ಪಿಸಿದೆ.

ಈ ಸಂದರ್ಭದಲ್ಲಿ ರಾಷ್ಟ್ರಿಯ ಸಂಗೊಳ್ಳಿ ರಾಯಣ್ಣ ಸೇನೆಯ ಸಂಸ್ಥಾಪಕರಾದ ಸಿದ್ದು ಭಾವಿಕಟ್ಟಿ. ರಾಜ್ಯ ಯುವ ಘಟಕ ಅಧ್ಯಕ್ಷರು ಪಾಪಣ್ಣ. ಬಿ. ಎನ್. ಮಹಿಳಾ ರಾಜ್ಯಾಧ್ಯಕ್ಷರಾದ ಕಾಳಮ್ಮ ಕೇದಾರಿ. ಹಾಗೂ ಬಾಗಲಕೋಟ ಮಹಿಳಾ ಜಿಲ್ಲಾಧ್ಯಕ್ಷರು ಶಾಂತ ಸೋಮಾಪುರ್. ಸೇರಿದಂತೆ ಸೇನೆಯ ಇತರೆ ಕಾರ್ಯಕರ್ತರು ಮಖಂಡರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ