Breaking News

ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ

Spread the love

ಉಡುಪಿ: ಇಂದು ವಲ್ಡ್ ಆರ್ಗನ್ ಡೊನೇಶನ್ ಡೇ. ಇತ್ತೀಚೆಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅಂಗಾಂಗ ದಾನ ಮಾಡುವುದರಿಂದ ಜೀವ ಉಳಿಸಬಹುದು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವ ಉಳಿಸಲು ಸಾಧ್ಯವಿದೆ. ನಿಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ಕಿಡ್ನಿ, ಹಾರ್ಟ್, ಲಿವರ್ ಇನ್ನೊಬ್ಬರ ಉಪಯೋಗಕ್ಕೆ ಬರಲಿ ಎಂದರು.

 

ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಬಗ್ಗೆ ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೆಂಗಳೂರಿಗೆ ತೆರಳಿದ ತಕ್ಷಣ ತಜ್ಞರ ಜೊತೆ ಮಾತನಾಡುವೆ. ತಜ್ಞರ ವರದಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಇಂದೇ ತಜ್ಞರ ತುರ್ತು ಸಭೆ ಕರೆಯುತ್ತೇನೆ ಎಂದು ಸಿಎಂ ಹೇಳಿದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ