Breaking News

‘ಖಾತೆ ಬದಲಾವಣೆಗೆ ಪಟ್ಟು ಹಿಡಿದವರನ್ನು ಸಂಪುಟದಿಂದ ವಜಾ ಮಾಡಿ’

Spread the love

ಬೆಳಗಾವಿ: ತಮಗೆ ನೀಡಲಾದ ಖಾತೆಗಳ ಗೌಪ್ಯತೆ ಕಾಪಾಡದ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿರುವ ಭೀಮಪ್ಪ ಗಡಾದ ಅವರು, 1992ರಲ್ಲಿ ಸಚಿವರಿಗಾಗಿ ಆಡಳಿತ ಸುಧಾರಣೆ ಸಚಿವಾಲಯದಿಂದ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಆದರೆ ಸಚಿವರಾದ ಆನಂದ ಸಿಂಗ್, ಎಂಟಿಬಿ ನಾಗರಾಜ್, ಶ್ರೀರಾಮುಲು, ಶಶಿಕಲಾ ಜೊಲ್ಲೆ ಪ್ರಬಲ ಖಾತೆಗಳಿಗಾಗಿ ಲಾಬಿ ಮಾಡಿ ನೀತಿ ಸಂಹಿತೆಯಲ್ಲಿನ ಕ್ರಮ ಸಂಖ್ಯೆ 13 ಮತ್ತು 20ರ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಚಿವರು ತನಗೆ ಹಂಚಿಕೆ ಮಾಡಲಾದ ಖಾತೆಯ ಗೌಪ್ಯತೆ ಕಾಪಾಡಿಕೊಂಡು ಕೆಲಸ ಮಾಡಬೇಕು. ರಾಜ್ಯದ ಉನ್ನತಿಗೆ ಶ್ರಮಿಸುತ್ತೇನೆ‌ ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಕ್ಯಾತೆ ತೆಗೆಯಬಾರದು. ಎಲ್ಲಾ ಖಾತೆಗಳು ಸಶಕ್ತವಾಗಿದ್ದು, ಯಾವುದು ಹೆಚ್ಚು ಕಡಿಮೆ ಇಲ್ಲ. ಖಾತೆಗೆ ಬದಲಾವಣೆ ಪಟ್ಟು ಹಿಡಿದವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಸಂಪುಟದಿಂದ ವಜಾಗೊಳಿಸದೇ ಇದ್ದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಸಿಎಂ ಅಧ್ಯಕ್ಷ, ಡಿಸಿಎಂ ಉಪಾಧ್ಯಕ್ಷ, 73 ಪದನಿಮಿತ್ತ ಸದಸ್ಯರ ನೇಮಿಸಿ ಅಧಿಸೂಚನೆ

Spread the loveಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಒಟ್ಟು 75 ಸದಸ್ಯರ ಬಲದ ಗ್ರೇಟರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ