Breaking News

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಜತೆಗೆ ರಾಜಕೀಯಕ್ಕೇ ನಿವೃತ್ತಿ ಘೋಷಿಸಲು ಸಜ್ಜಾದ ಆನಂದ್ ಸಿಂಗ್!

Spread the love

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಆನಂದ್ ಸಿಂಗ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ಪೀಕರ್ ಭೇಟಿಗೆ ಅವಕಾಶ ಕೇಳಿದ್ದು, ಇನ್ನು ಕೆಲವೇ ಗಂಟೆಯಲ್ಲಿ ಬೆಂಗಳೂರಿಗೆ ಆಗಮಿಸಿ ರಾಜೀನಾಮೆ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ, ರಾಜಕೀಯಕ್ಕೂ ನಿವೃತ್ತಿ ಘೋಷಣೆ ಮಾಡಲಿದ್ದಾರೆ. ಬೈ ಎಲೆಕ್ಷನ್ ನಡೆದರೂ ಅದಕ್ಕೂ ನಿಲ್ಲದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆನಂದ್​ ಸಿಂಗ್​ಗೆ ಪ್ರವಾಸೋದ್ಯಮ ಖಾತೆ ಸಿಕ್ಕಿದೆ. ತಾನು ಕೇಳಿದ್ದ ಖಾತೆಯನ್ನು ಕೊಟ್ಟಿಲ್ಲ ಎಂದು ಅಮಾಧಾನ ಗೊಂಡಿರುವ ಆನಂದ್​ ಸಿಂಗ್​, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇದುವರೆಗೂ ಇದಕ್ಕೆ ಸಿಎಂ ಬೊಮ್ಮಾಯಿ ಅಸ್ತು ಎಂದಿಲ್ಲ. ಇನ್ನಷ್ಟು ಅಸಮಾಧಾನಗೊಂಡ ಆನಂದ್​ಸಿಂಗ್​, ಕಳೆದ ಮೂರು ದಿನಗಳಿಂದ ಎಸ್ಕಾರ್ಟ್ ಇಲ್ಲದೆ ಓಡಾಡುತ್ತಿದ್ದಾರೆ. ಹೊಸಪೇಟೆಯ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಮೂರು ದಿನದಿಂದ ಪೂಜೆ ಸಲ್ಲಿಸಿದ್ದಾರೆ.

ಮನೆಯಿಂದ- ದೇವಾಲಯ ಮತ್ತು ದೇವಾಲಯದಿಂದ-ಮನೆಗೆ ಬರಬೇಕಾದ್ರೆ ಖಾಸಗಿ ವಾಹನದಲ್ಲಿ ಓಡಾಡಿದ್ದಾರೆ. ಇದು ಕುಟುಂಬ ಹಮ್ಮಿಕೊಂಡಿರುವ ಪೂಜೆ ಎಂದು ಆನಂದ್​ ಸಿಂಗ್​ ಹೇಳಿದ್ದಾರೆ. ಇನ್ನು ಶಾಸಕರ ಕಚೇರಿಯಲ್ಲಿದ್ದ ಬೋರ್ಡ್​ ಅನ್ನು ನಿನ್ನೆ ತೆರವು ಮಾಡಲಾಗಿದೆ. ನಿತ್ಯ ಬೆಳಗ್ಗೆ 10ಕ್ಕೆ ಆಗಮಿಸುತ್ತಿದ್ದ ಕಾರ್ಯಾಲಯದ ಸಿಬ್ಬಂದಿ, ಇಂದು ಕಚೇರಿಯ ಬಾಗಿಲು ತೆರೆದಿರಲಿಲ್ಲ. ಕಚೇರಿಗೆ ಯಾರೂ ಹೋಗಬೇಡಿ ಎಂದು ಆನಂದ್​ ಸಿಂಗ್ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಪೂಜೆ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ಆನಂದ್​ ಸಿಂಗ್​, ಸ್ಪೀಕರ್​ ಅನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ