Breaking News

ಇಂತಹ ಸರಕಾರ ಇದ್ದರೆಷ್ಟು? ಬಿಟ್ಟರೆಷ್ಟು?: ರಾಜ್ಯ ಸರಕಾರದ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

Spread the love

ಬೆಂಗಳೂರು, ಆ. 9: `ಅಸಮಾಧಾನ ಮತ್ತು ಭಿನ್ನಮತದ ಮೂಟೆಯಾಗಿರುವ ಸರಕಾರ ಯಾವ ಕ್ಷಣದಲ್ಲೂ ಬೀಳಬಹುದು. ಬಂಡಾಯದ ಬಿಸಿ ಎದುರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ಥಿತಿ ನೋಡಿದರೆ ಮರುಕ ಹುಟ್ಟುತ್ತಿದೆ’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬೊಮ್ಮಾಯಿ ನೇತೃತ್ವದ ನೂತನ ಸರಕಾರ ತೂತು ಬಿದ್ದ ದೋಣಿಯಂತಾಗಿದೆ. ಸಂಪುಟ ರಚನೆಯಾಗಿ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದರೂ, ಸರಕಾರದಲ್ಲಿ ಬಂಡಾಯ ನಿಂತಿಲ್ಲ. ಸದ್ಯ ರಾಜ್ಯ ಕೊರೊನ 3ನೆ ಅಲೆಯ ಆತಂಕದಲ್ಲಿದೆ. ಹೀಗಿರುವಾಗ ಈ ಸರಕಾರದ ಅಸ್ಥಿರತೆ ಜನರ ಜೀವವನ್ನು ಅಪಾಯಕ್ಕೆ ದೂಡಿರುವುದು ಸತ್ಯ. ಇಂತಹ ಸರಕಾರ ಇದ್ದರೆಷ್ಟು? ಬಿಟ್ಟರೆಷ್ಟು?’ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಬೊಮ್ಮಾಯಿ, ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಸಂಕಟ ಅನುಭವಿಸುತ್ತಿದ್ದಾರೆ. ಸಿಎಂ ಇಂತಹ ಅತಂತ್ರ ಸರಕಾರದ ನಾಯಕನಾಗುವ ಬದಲು ವಿಧಾನಸಭೆ ವಿಸರ್ಜಿಸಲಿ’ ಎಂದು ಸಲಹೆ ಮಾಡಿದ್ದಾರೆ.

`ಈ ಸರಕಾರದಲ್ಲಿ ಸಚಿವ ಸ್ಥಾನ ಸಿಗದವರು, ಸ್ಥಾನ ಸಿಕ್ಕರೂ ಬಯಸಿದ ಖಾತೆ ಸಿಗದ ಕೆಲವರು ದೆಹಲಿಗೆ ಹೋದರೆ, ಇನ್ನು ಕೆಲವರು ಬಿ.ಎಸ್.ಯಡಿಯೂರಪ್ಪ ಅವರ ಬಳಿ ಹೋಗುತ್ತಿದ್ದಾರೆ. ಹಾಗಾದರೆ ಈ ಸರಕಾರದಲ್ಲಿ ಬಸವರಾಜ ಬೊಮ್ಮಾಯಿಯವರ ಪಾತ್ರವೇನು? ಹಲವು ಪವರ್ ಸೆಂಟರ್ ಗಳಿರುವ ಈ ಸರಕಾರದಲ್ಲಿ ಬೊಮ್ಮಾಯಿಯವರು ಉತ್ಸವಮೂರ್ತಿಯಂತೆ ನೆಪ ಮಾತ್ರಕ್ಕೆ ಮುಖ್ಯಮಂತ್ರಿಯಾದಂತಿದೆ’ ಎಂದು ಟೀಕಿಸಿದ್ದಾರೆ.

 


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ