ಬೆಳಗಾವಿ: ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ಧರಾಮಯ್ಯ ಅವರು ರಾಜಕೀಯವಾಗಿ ಒಗ್ಗಟ್ಟಾಗುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅದು ಅಸಾಧ್ಯದ ಮಾತು ಎಂದು ಹೇಳಿದ್ದಾರೆ.
ರಾಜಕೀಯವಾಗಿ ಅವರ ಸಿದ್ಧಾಂತಗಳು, ವಿಚಾರ, ಹೋರಾಟವೇ ಬೇರೆಯಾಗಿದೆ.ಅವ್ರು ಹಾಸ್ಪಿಟಲ್ ನಲ್ಲಿ ಒಂದಾಗಬಹದು ಆದ್ರೆ ರಾಜಕೀಯವಾಗಿ ಅದು ಅಸಾಧ್ಯದ ಮಾತು ಎಂದು ವ್ಯಂಗ್ಯವಾಡಿದ ಅವರು ರಾಜಕೀಯವಾಗಿ ಯಾವಾಗಲೂ ಕೂಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ರಾಜಕೀಯವಾಗಿ 24 ಗಂಟೆಗಳು ಕಾಲ ಜಗಳವಾಡಲು ಸಾಧ್ಯವಿಲ್ಲ ಆಸ್ಪತ್ರೆಯಲ್ಲಿ ಕೂಡಿದ್ದಾರೆ, ಚರ್ಚೆ ಮಾಡಿರಬಹುದು ಎಂದ ಅವರು ರಾಜಕೀಯದಲ್ಲಿ ಪ್ರೀತಿ ಸೌಹಾರ್ದತೆಯೂ ಇದೆ ಎಂದರು.
ಈಗ ಕೊರೋನಾ ಪಾಸಿಟಿವ್ ಬಂದಿರುವದರಿಂದ ಇಬ್ಬರು ಒಂದಾಗಿದ್ದಾರೆ ನೆಗೆಟಿವ್ ಬಂದ್ ಮೇಲೆ ಮತ್ತೆ ಬೇರೇ ಬೇರೆಯಾಗುತ್ತಾರೆ ಎಂದು ಮಾಧ್ಯಮದವರ ಕಾಲೆಳೆದ ಸತೀಶ ಜಾರಕಿಹೊಳಿ ಅವರು ಸಿದ್ಧರಾಮಯ್ಯ ಅವರನ್ನು ಬೇಟಿಯಾಗಿ ನಿಮ್ಮ ಪ್ರಶ್ನೆಗಳನ್ನು ಕೇಳುತ್ತೇನೆ ಎಂದರು.
ಭವಿಷ್ಯದಲ್ಲಿ ಇದು ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಕುರಿತು ಯಡಿಯೂರಪ್ಪ ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
Laxmi News 24×7