Breaking News

ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ, ನನ್ನ ಸಮಯ ಬಂದೇ ಬರುತ್ತೆ: ಸಚಿವ ಸ್ಥಾನವೂ ಸಿಗದಿದ್ದಕ್ಕೆ ಬೆಲ್ಲದ್ ಬೇಸರ

Spread the love

ಮುಖ್ಯಮಂತ್ರಿ ರೇಸ್​ನಲ್ಲಿ ಅತ್ಯಂತ ಪ್ರಬಲವಾಗಿ ಕೇಳಿ ಬಂದ ಹೆಸರು ಅರವಿಂದ್​ ಬೆಲ್ಲದ್​​. ಧಾರವಾಡ ಕ್ಷೇತ್ರದ ಶಾಸಕ ಬೆಲ್ಲದ್​​​ ಸಿಎಂ ಆಯ್ಕೆ ವೇಳೆ ಹಲವು ಬಾರಿ ದೆಹಲಿಗೆ ಹಾರಿದ್ದು ಎಲ್ಲರ ಗಮನ ಸೆಳೆದಿತ್ತು. ಆದರೆ ಅಂತಿಮವಾಗಿ ಮುಖ್ಯಮಂತ್ರಿ ಸ್ಥಾನ ಬಸವರಾಜ ಬೊಮ್ಮಾಯಿಯವರ ಪಾಲಾಯಿತು. ನಂತರ ಬೆಲ್ಲದ್​ ಅವರನ್ನು ಡಿಸಿಎಂ ಮಾಡಲಾಗುತ್ತೆ, ಇಲ್ಲವೇ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬೆಲ್ಲಾ ನಿರೀಕ್ಷೆಗಳು ಗರಿ ಬಿಚ್ಚಿ ಹಾರಾಡಿದ್ದವು. ಆದರೆ ಕ್ಯಾಬಿನೆಟ್​ ಪಟ್ಟಿಯಲ್ಲೂ ಅರವಿಂದ್​ ಬೆಲ್ಲದ್​ ಹೆಸರು ಕಾಣಲಿಲ್ಲ. ಸಚಿವ ಸ್ಥಾನ ದೊರೆಯದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಬೆಲ್ಲದ್​, ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿದ್ದಾರೆ.

ಜೀವನದಲ್ಲಿ ಸೋಲು-ಗೆಲುವು ಶಾಶ್ಚತವಲ್ಲ. ಆದರೆ ಸಮಯಕ್ಕೆ ತಕ್ಕಂತೆ ಎಲ್ಲವನ್ನೂ ದೇವರು ಒದಗಿಸುತ್ತಾನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದರುವ ಅರವಿಂದ್ ಬೆಲ್ಲದ್, ಧಾರವಾಡ ಕ್ಷೇತ್ರದಿಂದ ಕಳೆದ ಎರಡು ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಜನರ ಪ್ರೀತಿ ವಿಶ್ವಾಸದಿಂದ ನನ್ನ ಹೆಸರು ಅತ್ಯುನ್ನದ ಹುದ್ದೆಗೆ ಪರಿಗಣಿಸಲ್ಪಟ್ಟಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ. ಆದರೆ ನನಗೆ ಸಚಿವ ಸ್ಥಾನ ಸಿಗದೆ ಇರುವುದು ಬೇಸರ ತಂದಿದೆ ಎಂದಿದ್ದಾರೆ. ಪಕ್ಷದ ಚೌಕಟ್ಟಿನೊಳಗೆ ಇದೆಲ್ಲವನ್ನು ಸಹಿಸಿಕೊಳ್ತೇನೆ, ಆದರೆ ಕ್ಷೇತ್ರದ ಜನರ ಸೇವೆ ಮಾಡಲು ಇದ್ಯಾವುದು ಅಡೆತಡೆ ಆಗುವುದಿಲ್ಲ. ಶಾಸಕನಾಗಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹಕಾರದಲ್ಲಿ ಅನೇಕ ಯೋಜನೆ ಜಾರಿಗೊಳಿಸಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಭ್ರಷ್ಟಾಚಾರದಂತ ಕಪ್ಪು ಚುಕ್ಕೆ ಬಂದಿಲ್ಲ.ಈ ರೀತಿ ನನ್ನನ್ನು ನೀವು ನಡೆಸಿ ಕೊಂಡಿದ್ದು ನನ್ನ ಸೌಭಾಗ್ಯವೇ ಸರಿ ಎಂದಿದ್ದಾರೆ.

ಶಾಸಕನಾಗಿ ಮತ್ತಷ್ಟು ಸೇವೆ ಮಾಡಲು ಸಿದ್ದನಿದ್ದೇನೆ. ಕ್ಷೇತ್ರದ ಜನರ ಸಮಸ್ಯೆ ಆಲಿಸುವ ಕಾಯಕ ನಂದು. ಇದರ ಜೊತೆಗೆ ಸಿದ್ದಾಂತ, ಸ್ವಚ್ಚ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ದನಿದ್ದೇನೆ. ಅಲ್ಲದೇ ಭ್ರಷ್ಟಾಚಾರಿಗಳ ವಿರುದ್ದ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಇರುತ್ತದೆ ಎಂದು ನಂಬಿದ್ದೇನೆ. ಏನೇ ಇರಲಿ ನಾವೆಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿ ಮಾಡೋಣ. ಧಾರವಾಡ ಕ್ಷೇತ್ರ ಶಿಕ್ಷಣ ಕಾಶಿ, ಸುಸಂಸ್ಕೃತ ಕ್ಷೇತ್ರವಾಗಿದೆ. ಹೀಗಾಗಿ ನನಗೆ ಸ್ಥಾನ ಸಿಗಲಿಲ್ಲ ಎಂದು ಪ್ರತಿಭಟನೆ ಮಾಡಬಾರದು. ಕೊರೋನಾ ಸಂದರ್ಭದಲ್ಲಿ ಯಾರು ಬೀದಿಗಳಿದು ಪ್ರತಿಭಟನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಸಂಪುಟ ಸಚಿವರುಗಳಿಗೆ ನಾನು ಶುಭ ಕೋರುತ್ತೇನೆ. ಮುಂದೊಂದು ದಿನ ತಾನು ಅಂದುಕೊಂಡ ಸ್ಥಾನ ಸಿಗುತ್ತೆ ಎಂದು ಅರವಿಂದ್ ಬೆಲ್ಲದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿಯಿಂದ‌ ಬಂದ ನಂತರ ನಾಪತ್ತೆಯಾಗಿದ್ದವರು ಈಗ ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ನಿಲುವನ್ನು ತಿಳಿಸಿದ್ದಾರೆ. ಬೆಲ್ಲದ್​ ಮುಂದಿರುವ ರಾಜಕೀಯ ಹಾದಿ ಯಾವುದು ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.

 


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ