ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಸಂಜಯನಗರದಲ್ಲಿ ನಡೆದಿದೆ.
ಮುನಿರಾಜು ಎಂಬಾತ ಬೈಕ್ ನಲ್ಲಿ ಹೋಗುತ್ತಿದ್ದ. ಆ ವೇಳೆ ಅಡ್ಡ ಬಂದ ಹೆಲ್ಮೆಟ್ ಹಾಕಿದ್ದ ವ್ಯಕ್ತಿಗಳು ಆತನನ್ನ ತಡೆದಿದ್ದಾರೆ. ಗಾಡಿಯಿಂದ ಕೆಳಕ್ಕೆ ಬೀಳಿಸಿ, ಕಬ್ಬಿಣದ ಸಲಾಕೆ, ಕ್ರಿಕೆಟ್ ಆಡುವ ವಿಕೆಟ್ ನಿಂದ ಜೋರು ಹಲ್ಲೆ ನಡೆಸಿದ್ದಾರೆ. ಮುನಿರಾಜು ಜೊತೆ ಇದ್ದ ಮಹಿಳೆ ಕಿರುಚಿಕೊಂಡರು ಬಿಟ್ಟಿಲ್ಲ. ಮೃಗೀಯವಾಗಿ ವರ್ತಿಸಿದ್ದಾರೆ.
ಘಟನೆಯಲ್ಲಿ ರಾಮಮೂರ್ತಿ ನಗರದ ಮುನಿರಾಜುಗೆ ತುಂಬಾ ಪೆಟ್ಟಾಗಿದೆ. ಈ ಘಟನೆಯನ್ನ ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಆ ವಿಡಿಯೋ ನೋಡ್ತಿದ್ರೆ ಮೈ ಜುಮ್ ಎನಿಸುತ್ತೆ. ಸದ್ಯ ಘಟನೆಗೆ ಕಾರಣವೇನು ಎಂಬುದು ತಿಳಿದಿಲ್ಲ. ಹೆಲ್ಮೆಟ್ ಧರಿಸಿ ಬಂದಿದ್ದರಿಂದ ಆ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. ನಡುರಸ್ತೆಯಲ್ಲೇ ನಡೆದ ಈ ಘಟನೆಗೆ ಜನ ಭಯಗೊಂಡಿದ್ದಾರೆ.