ಮುಗಿಲ್ಪೇಟೆ’ ಸಿನಿಮಾದಲ್ಲಿ ಮನುರಂಜನ್ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.ಮನುರಂಜನ್ ರವಿಚಂದ್ರನ್ ನಟನೆಯ ‘ಮುಗಿಲ್ಪೇಟೆ’ ಚಿತ್ರ ಬಿಡುಗಡೆ ಆಗಿದೆ. ಪ್ರೇಕ್ಷಕರು ಈ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ.
ಅದೇ ರೀತಿ, ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಕೂಡ ‘ಮುಗಿಲ್ಪೇಟೆ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮನುರಂಜನ್ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸಾಧುಕೋಕಿಲ ಅವರ ಪಾತ್ರ ಈ ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಅವರು ನನಗೆ ಸಿಕ್ಕಿದ್ದರೆ ಅವರಿಗೆ ಒಂದೆರಡು ಏಟು ಇನ್ನೂ ಚೆನ್ನಾಗಿ ಬಿದ್ದಿರುತ್ತಿತ್ತು. ಸರಿಯಾಗಿ ಒದೆಯುತ್ತಿದ್ದೆ. ನನ್ನ ಮಗನಿಗೆ ಹೊಡೆಯೋಕೆ ಬಂದಿಲ್ಲ. ಸಾಧು ಎಷ್ಟು ಒದೆ ತಿನ್ನುತ್ತಾರೋ ಸಿನಿಮಾ ಅಷ್ಟು ಚೆನ್ನಾಗಿ ಇರುತ್ತದೆ. ಸಾಕಷ್ಟು ಗೆಟಪ್ಗಳನ್ನು ಹಾಕಿಕೊಂಡು ಇಡೀ ಸಿನಿಮಾವನ್ನು ತಮಾಷೆಯಾಗಿ ಕಟ್ಟಿಕೊಡಲು ಅವರ ಪಾತ್ರ ಮುಖ್ಯವಾಗಿದೆ’ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ಚಿತ್ರದಲ್ಲಿ ಮನುರಂಜನ್ಗೆ ಜೋಡಿಯಾಗಿ ಹೊಸ ನಟಿ ಖಯಾದು ಲೋಹರ್ ಅಭಿನಯಿಸಿದ್ದಾರೆ.
Laxmi News 24×7