We
ಲಕ್ಷ್ಮೀ ನ್ಯೂಸ್ ಸಮಾಜದ ಕಟ್ಟ ಕಡೆಯ ಶೋಷಿತರ ಧ್ವನಿಯಾಗಿ, ಸಮಾಜಮುಖಿಯ ಪ್ರತಿಬಿಂಬವಾಗಿ ರಾಜ್ಯದ ಸಮಸ್ತ ಜನತೆಯ ಮೆಚ್ಚುಗೆ ಗಳಿಸಲಿ ಎಂದು ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಹೊಸ ವರ್ಷದಂದು ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ (ವೆಬ್ ಪೇಜ್ ) ಗೆ ಶುಭ ಹಾರೈಸಿದರು.
ಜನೆವರಿ 1,2020 ರಿಂದ ಮಾಧ್ಯಮ ಕ್ಷೇತ್ರದಲ್ಲಿ ನೂತನವಾಗಿ ಪಾದಾರ್ಪಣೆ ಮಾಡಿದ ಲಕ್ಷ್ಮೀ ನ್ಯೂಸ್ (ವೆಬ್ ಪೇಜ್) ತಂಡದ ವತಿಯಿಂದ ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಂತರ ಲಕ್ಷ್ಮೀ ನ್ಯೂಸ್ ನೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು ಲಕ್ಷ್ಮೀ ನ್ಯೂಸ್ ಸಮಾಜಕ್ಕೆ ಬೇಕಾದ ವಸ್ತುನಿಷ್ಟ ಸುದ್ದಿಗಳನ್ನು ಬಿತ್ತರಿಸಿ, ರಾಜ್ಯದ ಎಲ್ಲೆಡೆ ಮನೆ ಮಾತಾಗಲೆಂದು ಆಶಿಸಿದರು.ಹಾಗೂ ಸಮಾಜದ ಅಂಕುಡೊಂಕು, ಓರೆ ಕೋರೆಗಳನ್ನು ಎತ್ತಿ ಹಿಡಿದು ದಮನಿತರ ಧ್ವನಿಯ ಪ್ರತಿಬಿಂಬದಂತೆ ಮನೆ ಮನೆಯ ವಾಹಿನಿಯಾಗಿ ಸತ್ಯವನ್ನು ಜನರ ಮುಂದಿಡುವ ಮೂಲಕ ಜನ ಮೆಚ್ಚುವ ಪತ್ರಿಕೆಯಾಗಿ ಹೊರ ಹೊಮ್ಮಲೆಂದು ಆಶಿಸಿದರು.
ಇದೆ ಸಂದರ್ಭದಲ್ಲಿ ಲಕ್ಷ್ಮೀ ನ್ಯೂಸ್ ತಂಡದ ವತಿಯಿಂದ ಶಾಸಕರ ಆಪ್ತ ಸಹಾಯಕರಾದ ಪಿ ಎ. ನಾಗಪ್ಪ ಶೇಖರಗೊಳ ಅವರಿಗೂ ಕೂಡ ನೆನೆಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
Laxmi News 24×7