ಹಿಂದೂ ತಾಯಿ-ಮಗುವನ್ನು ಉಪಚರಿಸಿದ ಮುಸ್ಲಿಂ ದಂಪತಿಗಳು
ಬೆಳಗಾವಿ ಪೊಲೀಸರಿಂದ ಅಭಿನಂದನೆಗಳು
ದಿನಾಂಕ 14.0 4.2024 ರಂದು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಕುರಿತು ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ರೀಮತಿ ಶಾಂತವ್ವ ಕುಮಾರ ನಿಡಸೋಸಿ ಸಾ. ದಂಡಾಪುರ ಇವಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಉಪಚಾರಕ್ಕಾಗಿ ಪಕ್ಕದ ಬೆಡಲ್ಲಿದ್ದ ಶ್ರೀಮತಿ ಶಮಾ ರಿಜ್ವಾನ್ ದೇಸಾಯಿ ಸಾ. ನವಿ ಗಲ್ಲಿ ಕೊಣ್ಣೂರ ತಾ. ಗೋಕಾಕ ಇವಳು ತಾಯಿ ಶಾಂತವ್ವ ಹಾಗೂ ಮಗುವನ್ನು ಉಪಚರಿಸಿದ್ದಲ್ಲದೆ. ಅವರಿಬ್ಬರನ್ನೂ ಶಮಾ ದಂಪತಿಗಳು ತಮ್ಮ ಮನೆಗೆ ಕರೆದುಕೊಂಡು ಹೋಗಿ ಸರಿಯಾದ ಆರೈಕೆ ಮಾಡಿ ಸಂಪೂರ್ಣ ಗುಣಮುಖರಾದ ಮೇಲೆ. ಆ ತಾಯಿ ಮಗುವನ್ನು ಅವರ ಮನೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಶಮಾ ಹಾಗೂ ರಿಜ್ವಾನ್ ದಂಪತಿಗಳು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಸದರಿ ದಂಪತಿಯನ್ನು ಅಭಿನಂದಿಸಿದ್ದಾರೆ.