ಕಲಬುರಗಿ : ಮೈತ್ರಿ ಸರ್ಕಾರ ಕೆಡವಲು ಡ್ರಗ್ಸ್ ದಂಧೆ ಹಣ ಬಳಕೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಅಂತಾ ಕಾಣುತ್ತದೆ. ತಮ್ಮ ಸರ್ಕಾರ ಆಡಳಿತದಲ್ಲಿ ಇರುವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೊಲೀಸರಿಂದ ತನಿಖೆ ನಡೆಸಬೇಕಿತ್ತು. ಸಿಎಂಯಾಗಿ ಅಸಮರ್ಥರಾಗಿದ್ದದನ್ನು ಹೇಳಿಕೆ ಮೂಲಕ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈಗ ರಾಜಕೀಯ ಬೇಡ ಸರ್ಕಾರ ಡ್ರಗ್ಸ್ ದಂಧೆಯಲ್ಲಿರುವವರನ್ನು ಹೆಡೆಮುರಿ ಕಟ್ಟುತ್ತಿದೆ. ಯಾರನ್ನೂ ಕ್ಷಮಿಸೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.