Breaking News

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

Spread the love

ಬೆಂಗಳೂರು: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್  ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ  ವಿಚಾರಣೆ ವೇಳೆ ನಾನು ಕಾರು ಓಡಿಸಿಯೇ ಇಲ್ಲ ಎಂದಿದ್ದರು. ಅಲ್ಲದೆ ರಿಕ್ಕಿ ರೈ ಡ್ರೈವರ್ ಕಾರು ಓಡಿಸಿದ್ದು ನಾನು ಎಂದು ಹೇಳಿಕೆ ಕೊಟ್ಟಿದ್ದ. ಆದರೆ ಪೊಲೀಸರು ಕಾರಿನ ಬಗ್ಗೆ ಪ್ರಶ್ನೆ ಮಾಡಿದಾಗ ಚಾಲಕನ ಹೇಳಿಕೆಗಳಲ್ಲಿ ಸಂದೇಹ ಬಂದಿದೆ.

ಲ್ಯಾಂಬೋರ್ಗಿನಿ ಕಾರಿಗೆ  ಎಷ್ಟು ಗೇರ್ ಇದೆ. ಕಾರು ಸ್ಟಾರ್ಟ್ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಚಾಲಕ ಕಾರಿಗೆ ಕೀ ಇದೆ, ಆರು ಗೇರ್ ಇರುತ್ತೆ ಎಂದು ಉತ್ತರ ನೀಡಿದ್ದಾನೆ. ಅಸಲಿಗೆ ಲ್ಯಾಂಬೋರ್ಗಿನಿ ಕಾರಿಗೆ ಗೇರ್ ಇರೋದಿಲ್ಲ, ಕೀ ಸ್ಟಾರ್ಟ್ ಬದಲು ಸ್ವಿಚ್ ಸ್ಟಾರ್ಟ್ ಇರಲಿದೆ. ಹೀಗಾಗಿ ಮತ್ತೆ ರಿಕ್ಕಿ ರೈ ಕಾರು ಚಾಲನೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಸಾಕ್ಷ್ಯಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

ರಿಕ್ಕಿ ರೈ ಕಾರು ಚಾಲನೆ ಖಚಿತ ಪಡಿಸಲು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಟೆಕ್ನಿಕಲ್ ಮೊರೆ ಹೋಗಿದ್ದಾರೆ. ಸಿಡಿಆರ್ ರಿಪೋರ್ಟ್, ಸಿಸಿಟಿವಿ ದೃಶ್ಯಾವಳಿ, ಆರ್‌ಟಿಓ ಹಾಗೂ ಎಫ್‌ಎಸ್‌ಎಲ್ ತಜ್ಞರಿಂದ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮಧ್ಯೆ, ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಡ್ರಿಫ್ಟಿಂಗ್ ಮಾಡಿದ ದಿನವೇ ಕಬ್ಬನ್ ಪಾರ್ಕ್ ಬಳಿಯೂ ಡ್ರಿಫ್ಟಿಂಗ್ ಮಾಡಲಾಗಿದೆ.


Spread the love

About Laxminews 24x7

Check Also

ಹೈಕಮಾಂಡ್ ತೀರ್ಮಾನಿಸೋವರೆಗೂ ನಾನೇ ಸಿಎಂ: ಸಿದ್ದರಾಮಯ್ಯ

Spread the love ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡೋವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ  ಪುನರುಚ್ಚರಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ