ಬೆಂಗಳೂರು,ಜು.25- ಕೊರೋನಾದಿಂದ ಮೃತಪಟ್ಟಿರುವ ಅತಿ ಹೆಚ್ಚು ಸೋಂಕಿತರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅದನ್ನು ಪತ್ತೆಹಚ್ಚಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಕೋವಿಡ್‍ಗೆ ಪ್ರತಿದಿನ 50 ಜನ ಬಲಿಯಾಗುತ್ತಿದ್ದಾರೆ. ಮರಣ ಹೊಂದಿದ ಅತಿ ಹೆಚ್ಚು ಸೋಂಕಿತರು ತೀವ್ರ ಉಸಿರಾಟ ತೊಂದರೆ, ಕ್ಯಾನ್ಸರ್, ಕಿಮೋಥೆರಪಿ ಪಡೆಯುತ್ತಿದ್ದವರಾಗಿದ್ದಾರೆ. ನಾನಾ ಖಾಯಿಲೆಗಳಿಂದ ಬಳಲುತ್ತಿರುವ ಸೋಂಕಿತರನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ.
ವಿವಿಧ ಕಂಟೈನ್ಮೆಂಟ್ ಝೋನ್‍ನಲ್ಲಿರುವ ಕ್ಯಾನ್ಸರ್ ಕಿಮೋಥೆರಪಿ, ಎಚ್‍ಐವಿ, ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಗುರುತಿಸಿ ಆಂಟಿಜೆನ್ ಟೆಸ್ಟ್ ಮಾಡಿ ಸಾವಿನ ಸಂಖ್ಯೆ ಕಡಿಮೆ ಮಾಡಲು ಬಿಬಿಎಂಪಿ ಮುಂದಾಗಿದೆ.
ನಾನಾ ಕಾಯಿಲೆ ಇರುವವರು ಕೋವಿಡ್ ಟೆಸ್ಟ್ ಮಾಡಿಸದೆ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮೂರೇ ದಿನದಲ್ಲಿ ಮೃತಪಡುತ್ತಿರುವುದರ ಬಗ್ಗೆ ವರದಿಯಾಗುತ್ತಿದೆ.
Laxmi News 24×7