ಅಥಣಿ: ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ಕಿಡಿಕಾರಿದ್ದಾರೆ.
ಶಾಸಕ ಮಹೇಶ ಕುಮಟಳ್ಳಿ ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರನಷ್ಟು ಕೀಳು ರಾಜಕೀಯಕ್ಕೆ ನಾನು ಇಳಿಯಲ್ಲ.
ಅಧಿಕಾರಿಗಳು ಹಾಗೂ ಜನರ ಮಧ್ಯೆ ಇದ್ದು, ಕೊರೊನಾ ಸೋಂಕು ಹರಡದಂತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.
ಪ್ರತಿನಿತ್ಯ ಅವರ ಮನೆಗೆ ಹೋಗಿ ಭೇಟಿ ಕೊಟ್ಟು ಬರುವುದು ನನಗೆ ಆಗಲ್ಲ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಗೆ ಇದ್ದಾರೆ ಎಂದು ನನಗೆ ಮೊದಲಿನಿಂದಲೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಥಣಿ ಜಮಖಂಡಿ ಹಾಗೂ ಅಥಣಿ ತಾಲೂಕಿನ ಜನರಿಗಾಗಿ ರಾಜಾಪುರ ಬ್ಯಾರೇಜ್ ನಿಂದ ಕೃಷ್ಣಾನದಿ ಹಿಪ್ಪರಗಿ ಬ್ಯಾರೇಜ್ ಗೆ ನೀರು ಹರಿಸಲಾಗುತ್ತಿದೆ ಎಂದು ಶಾಸಕ ಮಹೇಶ ಕುಮಟಳ್ಳಿ ಹೇಳಿದ್ರು.
ಹಿಪ್ಪರಗಿ ಬ್ಯಾರೇಜ್ ಕೆಳಭಾಗದ ನಲವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವುದರಿಂದ ಮುಂಜಾಗೃತವಾಗಿ ರಾಜಾಪುರ ಬ್ಯಾರೇಜ್ ನಿಂದ ಹಿಪ್ಪರಿಗೆ ಬ್ಯಾರೇಜ್ ಗೆ ನೀರು ಹರಿಸಲಾಗುತ್ತಿದೆ. ,
ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
Laxmi News 24×7