Breaking News

ಧಾರವಾಡ | ಕೊರಿಯನ್ ಗೇಮ್‍ ಗೀಳಿಗೆ ಯುವಕ ಬಲಿ

Spread the love

ಧಾರವಾಡ: ಕೊರಿಯನ್ ಗೇಮ್‍ ಗೀಳಿಗೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‍ನಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಫೆ.6 ರಂದು ಯುವಕ ಶರಣಾಗಿದ್ದ. ಸಾವಿನ ನಂತರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಬೈಲ್ ಪರಿಶೀಲನೆ ವೇಳೆ ಕೊರಿಯನ್ ಗೆಮ್ಸ್ ಪತ್ತೆಯಾಗಿದೆ.

ಕೊರಿಯನ್ ಗೆಮ್ಸ್‌ಗೆ ವಿಕಾಸ್ ಅಡಿಕ್ಟ್ ಆಗಿದ್ದ‌ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್ ಯಾರಿಗೂ ಗೊತ್ತಿಲ್ಲದೇ ಗೆಮ್ಸ್ ಆಡುತಿದ್ದ. ಇನ್ನೂ ಸಾವಿಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಸೆಲ್ಫ್ ಮೆಸೇಜ್ ಮಾಡಿ‌ ಸಾವಿಗೀಡಾಗಿದ್ದ. ಈ ಸಂಬಂಧ ಅಸಹಜ ಸಾವು ಎಂದು ದೂರು ದಾಖಲಾಗಿತ್ತು.


Spread the love

About Laxminews 24x7

Check Also

ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ – ಮಾಜಿ ಶಾಸಕರ ಪುತ್ರ ರಾಜು ಬೋಳಶಟ್ಟಿಯ ಕೊಲೆ ಶಂಕೆ

Spread the loveಧಾರವಾಡ: ಇಲ್ಲಿನ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ