Breaking News

ಕೋಲಾರದಲ್ಲಿ 20 ಸಾವಿರ ಹೆಲ್ಮೆಟ್ ಉಚಿತ ವಿತರಣೆ; ಮುಗಿಬಿದ್ದ ಬೈಕ್ ಸವಾರರು

Spread the love

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಮೈದಾನ ಜಾತ್ರೆಯಂತಾಗಿತ್ತು. ಡಿಸೆಂಬರ್​ 1 ರಿಂದ ಜಿಲ್ಲೆಯಲ್ಲಿ ಬೈಕ್​ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್ ಜಾರಿಮಾಡಲಾಗಿದೆ. ಹೀಗಾಗಿ ಮುಳಬಾಗಿಲು ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆದಿನಾರಾಯಣ ನೇತೃತ್ವದಲ್ಲಿ ಬುಧವಾರ 25 ಸಾವಿರ ಉಚಿತ ಹೆಲ್ಮೆಟ್​ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವಸಂಜೀವಿನಿ ಕಾರ್ಯಕ್ರಮಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಚಾಲನೆ ನೀಡಿದರು.

ಬೈಕ್​ಗಳಲ್ಲಿ ಬಂದಿದ್ದ ಸವಾರರಿಗೆ ಹೆಲ್ಮೆಟ್ ವಿತರಿಸಲು 16 ಕೌಂಟರ್ ಓಪನ್ ಮಾಡಲಾಗಿತ್ತು. ಆದರೆ, ಉಚಿತ ಹೆಲ್ಮೆಟ್ ಪಡೆಯಲು ಜನ ‘ನಾ ಮುಂದು ತಾ ಮುಂದು’ ಎಂದು ಮುಗಿಬಿದ್ದರು. ಕೆಲವರಂತೂ ಕ್ಯಾಂಟರ್​​ಗಳನ್ನೇ ಏರಿ ಕೈಗೆ ಸಿಕ್ಕ ಹೆಲ್ಮೆಟ್​​ಗಳನ್ನು ಕೊಂಡೊಯ್ದರು. ಉಚಿತ ಹೆಲ್ಮೆಟ್ ಕೊಡುವ ಸುದ್ದಿ ಕೇಳುತ್ತಿದ್ದಂತೆಯೇ ಮುಳಬಾಗಿಲು ತಾಲೂಕಿನ ಜನ ಸುನಾಮಿಯಂತೆ ನುಗ್ಗಿ ಬಂದರು.

20 ರಿಂದ 25 ಸಾವಿರ ಉಚಿತ ಹೆಲ್ಮೆಟ್​ ಕೊಡುವ ಯೋಜನೆ ಇದಾಗಿತ್ತು. ಆದರೆ 30 ಸಾವಿರಕ್ಕೂ ಹೆಚ್ಚು ಜನ ಲಗ್ಗೆ ಇಟ್ಟಿದ್ದರಿಂದ ಮೈದಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಜನ ಸರದಿ ಬಿಟ್ಟು ಸಿಕ್ಕಿಸಿಕ್ಕ ಕಡೆಯಿಂದ ನುಗ್ಗಿ ಲಾರಿಗಳಲ್ಲಿ ತುಂಬಿಟ್ಟಿದ್ದ ಹೆಲ್ಮೆಟ್ ಬಾಕ್ಸ್​ಗಳನ್ನು ಹೊತ್ತೊಯ್ದರು. ಇನ್ನು ಹೆಲ್ಮೆಟ್ ಪಡೆಯಲು ಸರದಿಯಲ್ಲಿ ನಿಂತಿದ್ದ ಸಾವಿರಾರು ಜನ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು.

ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಬೈಕ್ ಸವಾರರ ಜೀವ ಉಳಿಸುವುದೇನೋ ನಿಜ. ಆದರೆ, ಉಚಿತ ಸಿಗುತ್ತದೆ ಎಂದು ಜನ ಜೀವವನ್ನೇ ಪಣಕ್ಕಿಟ್ಟು ಮುಗಿಬಿದ್ದಿದ್ದು ವಿಪರ್ಯಾಸ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ