ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್ಗೆ ಕ್ಯಾಚ್ ನೀಡಿದ್ರು.
ಇನ್ನೂ ಌರೋನ್ ಆಟ 20ರನ್ಗೆ ಅಂತ್ಯವಾಯ್ತು.
ಪಂಜಾಬ್ ಸ್ಪಿನ್ನರ್ಗಳ ಮೋಡಿಗೆ ಮಂಕಾದ RCB ಬ್ಯಾಟ್ಸ್ಮನ್
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ, ಎಚ್ಚರಿದಿಂದ ಆಟವಾಡಿದ್ರು. ಎಬಿ ಡಿವಿಲಿಯರ್ಸ್ ಬದಲು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ವಾಷಿಂಗ್ಟನ್ ಸುಂದರ್ ರನ್ ಗಳಿಸೋದಕ್ಕೆ ಪರದಾಡಿದ್ರು. ಪಂಜಾಬ್ ಸ್ಪಿನ್ನರ್ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ಗಳನ್ನ ಮರೆತಂತೆ ಆಟವಾಡಿದ್ರು. RCB ಬ್ಯಾಟ್ಸ್ಮನ್ಗಳ ಮೈಂಡ್ಸೆಟ್ನ್ನ ಅರ್ಥಮಾಡಿಕೊಂಡ ಕ್ಯಾಪ್ಟನ್ ರಾಹುಲ್, ಮೂರು ಸ್ಪಿನ್ನರ್ಗಳನ್ನ ಕಣಕ್ಕಿಳಿಸಿ ಬೆಂಗಳೂರು ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದ್ರು.
ಸುಂದರ್ 13ರನ್ ಗಳಿಸಿದ್ರೆ, ಶಿವಂ ದುಬೈ 23ರನ್ ಗಳಿಸಿ ಔಟಾದ್ರು. ಅಲ್ಲಿಗೆ, RCB 16ಓವರ್ಗಳಲ್ಲಿ 4ವಿಕೆಟ್ ಕಳೆದುಕೊಂಡು 127ರನ್ ಗಳಿಸಿತ್ತು. 6ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಎಬಿ ಡಿವಿಲಿಯರ್ಸ್, ಶಾರ್ಜಾದ ಚಿಕ್ಕ ಗ್ರೌಂಡ್ನಲ್ಲಿ ಬಿಗ್ ಸ್ಕೋರ್ ಕಲೆಹಾಕ್ತಾರೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ 2ರನ್ ಗಳಿಸಿದ್ದ ಎಬಿಡಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ರು.
ಇದೇ ಓವರ್ನಲ್ಲೇ 3ಬೌಂಡರಿ ಸಹಿತ 48ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ರು. ಆದ್ರೆ, ಕೊನೇ ಓವರ್ನಲ್ಲಿ ಇಸುರು ಉದನ ಹಾಗೂ ಕ್ರಿಸ್ ಮೊರಿಸ್ 25ರನ್ ಕಲೆಹಾಕಿದ್ರು. ಇದ್ರೊಂದಿಗೆ ಆರ್ಸಿಬಿ 171ರನ್ ಗಳಿಸ್ತು.
ಶಾರ್ಜಾದಲ್ಲಿ ರನ್ ಸುನಾಮಿ ಎಬ್ಬಿಸಿದ ಕೆ.ಎಲ್. ರಾಹುಲ್
172ರನ್ಗಳ ಸವಾಲಿನ ಗುರಿ ಬೆನ್ನತ್ತಿದ್ದ ಪಂಜಾಬ್ಗೆ, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ 78ರನ್ಗಳ ಜೊತೆಯಾಟವಾಡಿದ್ರು. RCB ಬೌಲರ್ಗಳ ಮೇಲೆ ಸವಾರಿ ಮಾಡಿದ ಮಯಾಂಕ್, 25ಬಾಲ್ಗಳಲ್ಲಿ 45ರನ್ ಗಳಿಸಿ ಚಹಲ್ ಎಸೆತದಲ್ಲಿ ಔಟ್ ಆದ್ರು. ಶಾರ್ಜಾದಲ್ಲಿ ರನ್ ಸುನಾಮಿ ಎಬ್ಬಿಸಿದ ಕೆ.ಎಲ್. ರಾಹುಲ್ ಕೊಹ್ಲಿಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ರು. 49ಎಸೆತಗಳಲ್ಲಿ 5ಭರ್ಜರಿ ಸಿಕ್ಸರ್ಗಳ ನೆರವಿನಿಂದ ರಾಹುಲ್ ಅಜೇಯ 61ರನ್ ಗಳಿಸಿದ್ರು.
ಇನ್ನೂ ಈ ಸೀಸನ್ನಲ್ಲಿ ಮೊದಲ ಪಂದ್ಯವಾಡಿದ ಕ್ರಿಸ್ ಗೇಲ್, ಬಿಗ್ ಇನ್ನಿಂಗ್ಸ್ ಕಟ್ಟಿದ್ರು. RCB ಬೌಲರ್ಗಳ ಎಸೆತಕ್ಕೆ ಮನಬಂದಂತೆ ಚೆಚ್ಚಿದ ಗೇಲ್, 5ಸಿಕ್ಸರ್ ಸಹಿತ 53ರನ್ ಗಳಿಸಿದ್ರು. ಈ ಮೂಲಕ ಟಿ-ಟ್ವೆಂಟಿ ಕ್ರಿಕೆಟ್ಗೇ ನಾನೆ ಬಾಸ್ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ರು. ಕೊನೇ ಎಸೆತದವರೆಗೂ ರಣರೋಚಕತೆ ಕಾಯ್ದುಕೊಂಡ ಪಂದ್ಯದಲ್ಲಿ ನಿಕೋಲಸ್ ಪೂರನ್, ಭರ್ಜರಿ ಸಿಕ್ಸರ್ ಬಾರಿಸೋದ್ರೊಂದಿಗೆ ಪಂಜಾಬ್ಗೆ ಗೆಲುವು ತಂದುಕೊಟ್ರು.