ನಿತ್ಯನೀತಿ : ದೈವವೆಂಬುದು ದೂರದಾಕಾಶದಲ್ಲಿ ಎಲ್ಲೋ ಇರುವ ವ್ಯಕ್ತಿ ಅಥವಾ ವಸ್ತುವಲ್ಲ. ಆ ಶಕ್ತಿ ನನ್ನೊಳಗೇ ಅವಿರ್ಭೂತವಾಗಿದೆ. ಅಜ್ಞಾನದಲ್ಲಿ ಹುಡುಕಿದರೆ ಆ ದಿವ್ಯತೆ ವ್ಯಕ್ತವಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
# ಪಂಚಾಂಗ : ಶನಿವಾರ, 03.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08
ಚಂದ್ರ ಉದಯ ರಾ.07.17 / ಚಂದ್ರ ಅಸ್ತ ಬೆ.07.08
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ(ದಿನಪೂರ್ತಿ) / ನಕ್ಷತ್ರ: ರೇವತಿ (ಬೆ.08.51) / ಯೋಗ: ವ್ಯಾಘಾತ (ರಾ.10.07) / ಕರಣ: ತೈತಿಲ (ಸಾ.06.12) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ / ದಿ: 17
ಮೇಷ: ವ್ಯಾಪಾರ-ವ್ಯವಹಾರಗಳಲ್ಲಿ ಬಿರುಸಿನ ಸ್ಪರ್ಧೆ
ವೃಷಭ: ಬ್ಯಾಂಕ್ ವ್ಯವಹಾರಗಳಲ್ಲಿ ಅಡೆತಡೆ ಗಳಿದ್ದರೂ ಕಾರ್ಯಸಾಧನೆಯಿಂದ ಸಮಾಧಾನವಿದೆ
ಮಿಥುನ: ವೃತ್ತಿರಂಗದಲ್ಲಿ ಬದಲಾವಣೆ ಸಾಧ್ಯತೆ
ಕಟಕ: ಧರ್ಮಪತ್ನಿಯ ಸಲಹೆ ಸೂಕ್ತ ಸಹಕಾರಗಳು ದಾಂಪತ್ಯ ಜೀವನವನ್ನು ಸಂತೃಪ್ತಿಗೊಳಿಸಲಿವೆ
ಸಿಂಹ: ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಉದ್ಯೋಗ ರಂಗದಲ್ಲಿ ಸಮಾಧಾನವಿಲ್ಲ ಕನ್ಯಾ: ಆಗಬೇಕಿದ್ದ ಕಾರ್ಯಗಳು ಹಂತ ಹಂತವಾಗಿ ಮುಗಿಯಲಿವೆ
ತುಲಾ: ಹಣಕಾಸಿನ ಪರಿಸ್ಥಿತಿ ಸಮಾಧಾನಕರವಾಗಿರಲಿದೆ
ವೃಶ್ಚಿಕ: ಶುಭ ಕಾರ್ಯಗಳ ಚಿಂತನೆ ಕಾರ್ಯಗತ
ಧನುಸ್ಸು: ಮಾನಸಿಕ ಒತ್ತಡದಿಂದ ದೂರವಾಗುವಿರಿ
ಮಕರ: ಅವಿವಾಹಿತರು ಯೋಚಿಸುವಂತಾದೀತು
ಕುಂಭ: ಸರ್ಕಾರಿ ನೌಕರರಿಗೆ ಮುಂಬಡ್ತಿ ದೊರೆಯಲಿದೆ
ಮೀನ: ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಕಾಡುವುದು