Breaking News

ಖಾನಾಪುರ : ಮಗಳ ಗಂಡನನ್ನ ಕೊಚ್ಚಿ ಕೊಲೆಗೈದ ಪಾಪಿ ಮಾವ

Spread the love

ಕಕ್ಕೇರಿ : ಕೌಟುಂಬಿಕ ಕಲಹದಿಂದ ಅಳಿಯನನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಿಷ್ಟಪ್ಪ ಕೊನಸಕುಂಪಿ(43) ಕೊಲೆಯಾದ ದುರ್ದೈವಿ.

ಸೋಮವಾರ ರಾತ್ರಿ ಬಿಷ್ಟಪ್ಪ ತನ್ನ ಹೆಂಡತಿಯ ತಂದೆಯೊಂದಿಗೆ ಜಗಳವಾಡಿದ್ದಾನೆ. ಬಳಿಕ ರಾತ್ರಿ ಭತ್ತದ ರಾಶಿ ಕಾಯಲು ಕಣದಲ್ಲಿ ಹೋಗಿದ್ದಾನೆ. ಈ ವೇಳೆ ಮಾವ ಮಲಗಿದ್ದ ಬಿಷ್ಟಪ್ಪ ನ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಂದು ಹಾಕಿ, ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಹೆಸರು ತಿಳಿದು ಬಂದಿಲ್ಲ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ…

Spread the love ಬೆಳೆ ಹಾನಿ ಪರಿಹಾರದಿಂದ ವಂಚಿತರಾದ ಮರಕಟ್ಟೆ ರೈತರು; ಸರ್ಕಾರದ ವಿರುದ್ಧ ಆಕ್ರೋಶ.! ಜಿಲ್ಲಾಧಿಕಾರಿ ಕಛೇರಿ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ