ಕಲಬುರಗಿ: ಜಿಲ್ಲೆಯಾದ್ಯಂತ ಧಾರಕಾರ ಮಳೆ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಸುಂದರ ನಗರದಲ್ಲಿ ಅಜ್ಜಿ ಬಲಿಯಾಗಿದ್ದಾಳೆ. ಭೀಮಾಬಾಯಿ (96) ಮೃತಪಟ್ಟ ವೃದ್ಧೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯಲ್ಲಿ ಮಲಗಿದ್ದ ಅಜ್ಜಿ ಜೀವ ಕಳೆದುಕೊಂಡಿದ್ದಾರೆ. ಕಣ್ಣು ತೆರೆದು ನೋಡುವಷ್ಟರಲ್ಲಿ ವಿದ್ಯುತ್ ಸ್ಪರ್ಶಿಸಿ ಯಮನ ಪಾದ ಸೇರಿದ್ದಾರೆ.
ಮಳೆಯಿಂದಾಗಿ ಮನೆಯೊಳಗೆ ಮಳೆ ನೀರು ಹೊಕ್ಕಿತ್ತು. ಈ ವೇಳೆ ನೀರಿನೊಂದಿಗೆ ವಿದ್ಯುತ್ ಸಹ ಪ್ರವೇಶಿಸಿ ಅಜ್ಜಿ ಮಲಗಿದ್ದಲ್ಲೆ ಮೃತಪಟ್ಟಿದ್ದಾರೆ.
ಅಜ್ಜಿಯ ಮನೆ ಶೇಕಡಾ ಅರ್ಧದಷ್ಟು ಜಲಾವೃತವಾಗಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನ ಮನೆಯಿಂದ ಹೊರತೆಗೆದಿದ್ದಾರೆ.

Laxmi News 24×7