ಕಾಗವಾಡ: ಇಂಗ್ಲಿಷ್ ಮಾಧ್ಯಮ ಕೇವಲ ನಗರ ಪ್ರದೇಶಗಳಿಗೆ ಸೀಮಿತಗೊಂಡ ಕಾಲದಲ್ಲಿ ಶಿರಗುಪ್ಪಿಯಂತಹ ಚಿಕ್ಕ ಹಳ್ಳಿಯಲ್ಲಿ 1980ರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಿದ ದಿ.ಶ್ರೀದತ್ತ ಶೆಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾಂವಿ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಮಿತಿಯ ಆಚಾರ್ಯ ಶ್ರೀ ವಿದ್ಯಾಸಾಗರ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಎಸ್‌ವಿಎಎಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜ್ಞಾನಶ್ರೀ ಉತ್ಸವದಲ್ಲಿ ಮಾತನಾಡಿ, ದಿ.ಶ್ರೀದತ್ತ ಶೆಟ್ಟಿ ಅವರ ದೂರದೃಷ್ಟಿ ಲವಾಗಿ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯುತ್ತಿದೆ ಎಂದರು.
ಸುದರ್ಶನ ತೇಜಸ್ವಿ, ಮಹಾವೀರ ಪಡನಾಡ, ಶಿಕ್ಷಣ ಸಂಯೋಜಕ ಭರತ ಭಿಲವಡಿ, ಅಜಿತ ಶೆಟ್ಟಿ, ಜ್ಞಾನಪೀಠ ಶಿಕ್ಷಣ ಸಮಿತಿ ಅಧ್ಯಕ್ಷ ಯು.ಎಸ್.ಶೆಟ್ಟಿ, ಕಾರ್ಯದರ್ಶಿ ವಿ.ಎಸ್.ಶೆಟ್ಟಿ, ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಎಸ್.ವಂಟಗುಡೆ, ಎಸ್.ಕೆ.ಮಾಂಜರೆ, ಧರೇಪ್ಪ ಕುಸನಾಳೆ, ಭಾವುಸಾಬ ಕಾಗವಾಡೆ, ಶ್ರೇಯಾಂಶ ನಾಂದಣಿ ಇತರರಿದ್ದರು. ಎಸ್.ಕೆ.ಮಾಂಜರೆ ಸ್ವಾಗತಿಸಿದರು. ಶಿಕ್ಷಕಿ ಎನ್.ವಿ.ಅಕಿವಾಟೆ ವಂದಿಸಿದರು.
Laxmi News 24×7