Breaking News

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್​ನ ಕಟ್ಟಿಹಾಕಿದ ಯು ಮುಂಬಾ..!

Spread the love

ಬೆಂಗಳೂರು ಬುಲ್ಸ್ ವಿರುದ್ಧ ಯು-ಮುಂಬಾ 45-34 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಭಾರೀ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಅಂತಿಮ ಹಂತದಲ್ಲಿ ಸೋಲೊಪ್ಪಿಕೊಂಡಿತು.

ಉಭಯ ತಂಡಗಳು ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿತ್ತು. ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಕುಮಾರ್ ಶೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡಿದರೆ, ಯು-ಮುಂಬಾದಲ್ಲಿ ಅಭಿಷೇಕ್ ಸಿಂಗ್ ಮಿಂಚಿದರು.

ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 10 ರೈಡಿಂಗ್ ಪಾಯಿಂಟ್ ಕಲೆ ಹಾಕಿದರೆ, ಅಭಿಷೇಕ್ ಯು-ಮುಂಬಾಗೆ 8 ರೈಡಿಂಗ್ ಪಾಯಿಂಟ್ ಕೊಟ್ಟರು. ಆದರೆ ರಾಹುಲ್ ಸೆತ್ಪಾಲ್ ಟ್ಯಾಕಲ್​ಗಳ ಮೂಲಕ 6 ಅಂಕಗಳನ್ನು ಗಳಿಸಿದ್ದು ಯು ಮುಂಬಾಗೆ ಪ್ಲಸ್ ಪಾಯಿಂಟ್ ಆಯಿತು.


Spread the love

About Laxminews 24x7

Check Also

ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿಎಂ

Spread the loveಮೈಸೂರು: ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ